ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ

June 18, 2020

ಮಡಿಕೇರಿ ಜೂ.18 : ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಕಳೆದ 24 ಗಂಟೆಯಲ್ಲಿ 204 ಮಿ ಮೀ ಮಳೆಯಾಗಿದೆ. ಮಡಿಕೇರಿ 49, ನಾಪೋಕ್ಲು 54, ಸಂಪಾಜೆ 61, ವಿರಾಜಪೇಟೆ 51, ಹುದಿಕೇರಿ 51 ಮಿಲಿ ಮೀಟರ್, ಸೋಮವಾರಪೇಟೆಯ ಶಾಂತಳ್ಳಿ 42, ಅಮ್ಮತ್ತಿ 28.5, ಪೊನ್ನಂಪೇಟೆ 36‌ ಮಿಲಿ ಮೀಟರ್ ಮಳೆಯಾಗಿದೆ.

error: Content is protected !!