ಆನ್ಲೈನ್ ಸೋಲೋ ನೃತ್ಯ ಸ್ಪರ್ಧೆ : ಕಿಂಗ್ಸ್ ಪ್ರತಿಭೆಗಳು ಪ್ರಥಮ

18/06/2020

ಮ, ಜೂ. 18 : ಕೊರೊನ ವಿಶ್ವದೆಲ್ಲೆಡೆ ವ್ಯಾಪಿಸಿರುವ ಕಾರಣ ಎಲ್ಲವೂ ಲಕ್ಡೌನ್ ಆಗಿದೆ. ಇದೇ ಸಮಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭೆಗೆ ನಾಪೋಕ್ಲುವಿನ ಗುರುಕುಲ ನೃತ್ಯ ಸಂಸ್ಥೆಯು ಆನ್ಲೈನ್ ಸೋಲೋ ನೃತ್ಯ ಸ್ಫರ್ಧೆ ನಡೆಸುವ ಮೂಲಕ ಉತ್ತಮ ಅವಕಾಶ ನೀಡಿತ್ತು.
ಈ ಸ್ಫರ್ಧೆಯಲ್ಲಿ ಕಾಂಟೆಂಪ್ರೋರಿ ವಿಭಾಗದಲ್ಲಿ ಮೂರು ಪ್ರಥಮ ಬಹುಮಾನಗಳನ್ನು ಮಡಿಕೇರಿಯ ನೃತ್ಯಪಟುಗಳು ಪಡೆದುಕೊಂಡಿದ್ದಾರೆ. ಸಬ್ ಜೂನಿಯರ್ ವಿಭಾಗದಲ್ಲಿ ದಿಶನ್ ಪೊನ್ನಪ್ಪ , ಜೂನಿಯರ್ ವಿಭಾಗದಲ್ಲಿ ನಿಹಾಲ್ ಕೆ.ಎಸ್. ಹಾಗೂ ಸೀನಿಯರ್ ವಿಭಾಗದಲ್ಲಿ ರೋಹನ್ ಕುಶಾಲಪ್ಪ ಇವರುಗಳು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಈ ಮೂವರು ವಿದ್ಯಾರ್ಥಿಗಳು ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ಡಾನ್ಸ್ ಇನ್ಸ್ಟಿಟ್ಯೂಟ್ನಲ್ಲಿ ಕಳೆದ 3 ವರ್ಷ ಗಳಿಂದ ಮಹೇಶ್ ಅವರ ತರಬೇತಿಯಲ್ಲಿ ನೃತ್ಯಾಭ್ಯಾಸ ನಡೆಸುತಿದ್ದಾರೆ.
ಸ್ಪರ್ಧೆಯ ತೀರ್ಪುಗಾರಿಕೆ ಯನ್ನು ಬೆಂಗಳೂರಿನ ಸಂತೋಷ್,ಜಗ್ಗು,ಸುನಿಲ ಅವರುಗಳು ನೀಡಿದ್ದಾರೆ.