ಗೊಂದಿಬಸವನಹಳ್ಳಿಯಲ್ಲಿ ಕಾರ್ಮಿಕ ನೇಣಿಗೆ ಶರಣು

18/06/2020

ಕುಶಾಲನಗರ ಜೂ. 18 : ಕಾರ್ಮಿಕ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಗೊಂದಿಬಸವನಹಳ್ಳಿಯ ರಾಜು ಎಂಬವರ ಪುತ್ರ ಕಟ್ಟಡ ಕಾರ್ಮಿಕ ನಂದೀಶ್ (23) ಆತ್ಮಹತ್ಯೆಗೆ ಶರಣಾದ ಯುವಕ.
ಕುಶಾಲನಗರದ ಹೊಸ ಹೌಸಿಂಗ್ ಬೋರ್ಡ್‍ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಶೌಚಾಲಯದಲ್ಲಿ ಕಿಟಕಿ ಸರಳಿಗೆ ಟವಲ್‍ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಕುಶಾಲನಗರ ಠಾಣಾಧಿಕಾರಿ ವೆಂಕಟರಮಣ ಮತ್ತು ಸಿಬ್ಬಂದಿಗಳು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.