ರೇಂಜರ್ಸ್ ಬ್ಲಾಕ್ ನಲ್ಲಿ ಕಳಪೆ ಕಾಮಗಾರಿ : ಜಿಲ್ಲಾಧಿಕಾರಿಗಳಿಗೆ ದೂರು

18/06/2020

ಸೋಮವಾರಪೇಟೆ ಜೂ. 18 : ಪಟ್ಟಣ ಪಂಚಾಯ್ತಿ ವತಿಯಿಂದ ನಡೆಯುತ್ತಿರುವ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಬಿಲ್ ಪಾವತಿಸದಂತೆ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಾಗರೀಕರು ದೂರು ಸಲ್ಲಿಸಿದ್ದಾರೆ.
ಪಟ್ಟಣದ ಬಹುತೇಕ ಕಡೆಗಳಲ್ಲಿ ಚರಂಡಿ, ರಸ್ತೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ ವಾರ್ಡ್ ನಂ 7ರ ರೇಂಜರ್ಸ್ ಬ್ಲಾಕ್ ನ ಅರಣ್ಯ ವಲಯಾಧೀಕಾರಿ ವಸತಿ ಗೃಹದ ಹಿಂಭಾದಲ್ಲಿ ಎಸ್.ಎಫ್.ಸಿ ಅನುದಾನದಲ್ಲಿ 5ಲಕ್ಷ ರೂ ವೆಚ್ಚದ ಚರಂಡಿ ಕಾಮಗಾರಿ ತೀರ ಕಳಪೆಯಿಂದ ಕೊಡಿದ್ದು ಹೆಚ್ಚಿನ ಎಂ. ಸ್ಯಾಂಡ್ ಬಳಸಿ ಕೆಲಸ ಮಾಡಿದ್ದಾರೆ ಅಲ್ಲದೆ ರಸ್ತೆ ಬದಿಯಲ್ಲಿ ಒಂದೆ ಸಮವಾಗಿ ನಿರ್ಮಿಸದೆ ಓರೆಕೊರೆಯಾಗಿರುತ್ತದೆ. ಮತ್ತು ಪ್ಲೊರಿಂಗ್ ಸರಿಯಾಗಿ ಮಾಡದೆ ಇರುವುದರಿಂದ ನೀರು ಸರಿಯಾಗಿ ಹರಿಯುವುದಿಲ್ಲ ಇಷ್ಟೊಂದು ದೊಡ್ಡ ಮೊತ್ತದ ಚರಂಡಿ ಕಳಪೆ ಮಾಡಿರುವುದರಿಂದ ಗುಣಮಟ್ಟ ಪರಿಶೀಲಿಸಿ, ಸರಿಪಡಿಸದೆ ಬಿಲ್ ಪಾವತಿಸಬಾರದು ಮತ್ತು ಗುತ್ತಿಗೆ ಪಡೆದಿರುವ ಹೆಚ್.ಡಿ.ಕೋಟೆಯ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿ, ಪಟ್ಟಣ ಪಂಚಾಯ್ತ ಆಡಳಿತಾಧಿಕಾರಿಗಳಾದ ತಹಶಿಲ್ಧಾರ್ ಹಾಗೂ ಮುಖ್ಯಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.