ಸೋಮವಾರಪೇಟೆಯಲ್ಲಿ ಮಾಸ್ಕ್ ದಿನಾಚರಣೆ : ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ : ತಾ. ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸಲಹೆ

18/06/2020

ಸೋಮವಾರಪೇಟೆ ಜೂ 18 : ಜನತೆ ಕಡ್ಡಾಯವಾಗಿ ಮಾಸ್ಕ್ ದರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕೆಂದು ತಾಲೋಕು ಪಂಚಾಯ್ತಿ ಉಪಾಧ್ಯಕ್ಷ ಎಂ.ಬಿ ಅಭಿಮನ್ಯು ಕುಮಾರ್ ತಿಳಿಸಿದರು.
ತಾಲೋಕು ಆಡಳಿತದ ವತಿಯಿಂದ ಪಟ್ಟಣದ ಜೆ.ಸಿ ವೇದಿಕೆ ಸಮೀಪ ಆಯೋಜಿಸಲಾಗಿದ್ದ ಮಾಸ್ಕ್ ದಿನಾಚರಣೆ ಅಂಗವಾಗಿ ಜನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಮಹಾಮಾರಿ ಕೊರೋನಾ ಹೊಡೆದೊಡಿಸಲು ಸರ್ಕಾರ ಶತ ಪ್ರಯತ್ನ ಮಾಡುತ್ತಿವೆ ಆದರೂ ಕಷ್ಟವಾಗುತಿದೆ. ಜನತೆ ಜಾಗೃತರಾಗಿರಬೇಕು ಸರ್ಕಾರದ ಜೊತೆ ಕೈಗೂಡಿಸಬೇಕೆಂದರು. ಕೊರೋನಾ ನಿಗ್ರಹಕ್ಕೆ ಸಾಕಷ್ಟು ಇಲಾಖೆಗಳು ಶ್ರಮಿಸಿವೆ ಅವರಿಗೆ ನಾವೆಲ್ಲಾ ಚಿರಾರುಣಿಗಳಾಗಿದ್ದೆವೆ ಜನತೆ ಕಡ್ಡಾಯವಾಗಿ ಮಾಸ್ಕ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕೆಂದರು.
ಕೊರೋನಾ ನಿಗ್ರಹಕ್ಕಾಗಿ ಸೇವೆ ಸಲ್ಲಿಸಿದ ಎಲ್ಲಾ ಇಲಾಖೆ ಸಿಬ್ಬಂದಿಗಳಿಗೆ ತಹಶಿಲ್ದಾರ್ ಗೋವಿಂದ ರಾಜು ಕೃತಜತೆ ಅರ್ಪಿಸಿದರು.
ಮಾಸ್ಕ್ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನ ಜಾಗೃತಿ ಜಾಥಾ ನಡೆಯಿತು.
ಈ ಸಂಧರ್ಭ ತಾಲೋಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಂಗಮ್ಮ ಪಟ್ಟಣ ಪಂಚಾಯ್ತಿ ಸದಸ್ಯರುಗಳಾದ ನಳಿನಿಗಣೇಶ್, ಶೀಲಾ ಡಿಸೋಜಾ, ಮಹೇಶ್ ಮುಖ್ಯಾಧಿಕಾರಿ ನಾಚಪ್ಪ ಅಭಿಯಂತರ ಹೇಮಂತ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.