ಮಾಸ್ಕ್ ದಿನಾಚರಣೆ : ನಗರಸಭೆಯಿಂದ ಜಾಗೃತಿ ಜಾಥಾ

18/06/2020

ಮಡಿಕೇರಿ ಜೂ.18 : ಮಡಿಕೇರಿ ನಗರಸಭೆ ವತಿಯಿಂದ ಮಾಸ್ಕ್ ದಿನಾಚರಣೆ ಪ್ರಯುಕ್ತ ಗುರುವಾರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ನಗರಸಭೆ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಭಿತ್ತಿ ಪತ್ರ ಹಿಡಿದು ಮಾಸ್ಕ್ ಧಾರಣೆಯ ಅವಶ್ಯಕತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ನಗರಸಭೆ ಪೌರಾಯುಕ್ತರಾದ ಶ್ರೀನಿವಾಸ್ ಇತರರು ಇದ್ದರು.