ಜೂ.21 ರಂದು ಸೂರ್ಯ ಗ್ರಹಣ ಪ್ರಯುಕ್ತ ದೇವರ ದರ್ಶನಕ್ಕೆ ಅವಕಾಶವಿಲ್ಲ

18/06/2020

ಮಡಿಕೇರಿ ಜೂ.18 : ಜೂನ್ 21 ರಂದು ಸಂಭವಿಸಲಿರುವ ಖಂಡಗ್ರಾಸ ಸೂರ್ಯ ಗ್ರಹಣದ ಪ್ರಯುಕ್ತ ಮಡಿಕೇರಿಯ ಓಂಕಾರೇಶ್ವರ ದೇವಾಲಯ ಹಾಗೂ ಭಾಗಮಂಡಲದ ಭಗಂಡೇಶ್ವರ, ತಲಕಾವೇರಿ ದೇವಾಲಯಗಳಲ್ಲಿ ಜೂನ್, 21 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕಾಗಿ ದೇವಾಲಯದ ಪ್ರಕಟಣೆ ಕೋರಿದೆ.