ಅನಂತ್ ನಾಗ್‍ನಲ್ಲಿ ಉಗ್ರನ ಸೆರೆ

19/06/2020

ಜಮ್ಮು-ಕಾಶ್ಮೀರ ಜೂ.19 : ಕೇಂದ್ರಾಡಳಿತ ಪ್ರದೇಶದ ಜಮ್ಮು-ಕಾಶ್ಮೀರದ ಅನಂತ್ ನಾಗ್ ಬಳಿ ಭದ್ರತಾ ಪಡೆಗಳು ಇಂದು ಉಗ್ರನೊಬ್ಬನನ್ನು ಸೆರೆ ಹಿಡಿದಿದ್ದಾರೆ. ಇಮ್ರಾನ್ ನಬಿ ಬಂಧಿತ ಉಗ್ರನಾಗಿದ್ದಾನೆ.
ಅನಂತ್ ನಾಗ್ ಬಳಿ ಜಂಗ್ಲಾತ್ ಮಂಡಿ ಬಳಿ ಕಳೆದ ರಾತ್ರಿ ನಬಿಯನ್ನು ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದು, ಆತನಿಂದ ಪಿಸ್ತೂಲ್ ವೊಂದನ್ನು ವಶಪಡಿಸಿಕೊಂಡಿದ್ದಾರೆ.
ಈ ವರ್ಷದ ಮೇ 10 ರಂದು ಮನೆಯಿಂದ ಓಡಿ ಹೋಗಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿಕೊಂಡಿದ್ದ ಎಂದು ಭಾರತೀಯ ಸೇನೆಯ ಚೀನಾರ್ ಕಾಪ್ರ್ಸ್ ತಿಳಿಸಿದೆ.
ಕುಲ್ಗಾಮ್ ನಿವಾಸಿಯಾದ ನಬಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಮನೆಯಿಂದ ಏಕೆ ಹೊರಗೆ ಹೋಗಲಾಯಿತು, ಉಗ್ರ ಸಂಘಟನೆಯೊಂದಿಗೆ ಹೇಗೆ ಸಂಪರ್ಕಕ್ಕೆ ಬಂದಿದ್ದಾಗಿ ಪ್ರಶ್ನಿಸಲಾಗಿದೆ.