ಮಂಗಳೂರು ಶೈಲಿಯ ಸಿಗಡಿ ಪ್ರೈ ಮಾಡುವ ವಿಧಾನ

19/06/2020

ಸಾಮಾಗ್ರಿಗಳು : ಜಂಬೋ ಸಿಗಡಿ, ಲಿಂಬೆ ರಸ – 3 ಟೇಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಬಿಳಿ ಕಾಳುಮೆಣಸು -1ಟೇಸ್ಪೂನ್, ಮೊಸರು – 2ಕಪ್‌ಗಳು, ಕೆಂಪು ಮೆಣಸು – 20 (ಹುರಿದದ್ದು), ಕೊತ್ತಂಬರಿ ಬೀಜ – 1ಟೇಸ್ಪೂನ್, ಮೆಂತೆ ಬೀಜ – 1 ಟೇಸ್ಪೂನ್, ಜೀರಿಗೆ – 1ಟೇಸ್ಪೂನ್, ಬೆಳ್ಳುಳ್ಳಿ ಎಸಳು – 10, ಹುಳಿ ನೀರು – 1 ಕಪ್, ತುಪ್ಪ – 3ಟೇಸ್ಪೂನ್, ಎಣ್ಣೆ – 2ಟೇಸ್ಪೂನ್

ಮಾಡುವ ವಿಧಾನ: ಉಪ್ಪು, ಬಿಳಿ ಕಾಳುಮೆಣಸು, ಹಳದಿ ಮತ್ತು ಲಿಂಬೆ ರಸವನ್ನು ಸಿಗಡಿಗೆ ಲೇಪಿಸಿ, ಈ ಸಿಗಡಿಯನ್ನು ರಾತ್ರಿ ಪೂರ್ತಿ ರೆಫ್ರಜರೇಟರ್‌ನಲ್ಲಿ ಹಾಗೆಯೇ ಇಡಿ.ಪ್ಯಾನ್ ಬಿಸಿ ಮಾಡಿ ಮತ್ತು ನೆನೆದ ಸಿಗಡಿಯನ್ನು 3-4 ನಿಮಿಷಗಳಷ್ಟು ಕಾಲ ಸ್ವಲ್ಪ ಫ್ರೈ ಮಾಡಿ.
4.ಇದೇ ಸಮುದಲ್ಲಿ ಕೆಂಪು ಮೆಣಸು, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಬೀಜಗಳು, ಬೆಳ್ಳುಳ್ಳಿ ಮತ್ತು ಹುಳಿಯನ್ನು ಒಟ್ಟಿಗೆ ದಪ್ಪಗೆ ಕಡೆಯಿರಿ.ಪ್ಯಾನ್‌ನಿಂದ ಹುರಿದ ಸಿಗಡಿಯನ್ನು ಹೊರತೆಗೆದು ಬದಿಗಿರಿಸಿ.ಕಡೆದ ಮಸಾಲೆಯನ್ನು ಈ ಪ್ಯಾನ್‌ನಲ್ಲಿರುವ ಎಣ್ಣೆಯಲ್ಲಿ ಹಸಿ ಪರಿಮಳ ಹೋಗುವವರೆಗೆ 3-5 ನಿಮಿಷಗಳ ಕಾಲ ಬೇಯಿಸಿ. 7.ನೆನೆಸಿದ ಸಿಗಡಿ, ತುಪ್ಪವನ್ನು ಪ್ಯಾನ್‌ಗೆ ಹಾಕಿ.ಅಗತ್ಯವಿದ್ದಷ್ಟು ಉಪ್ಪು ಬಳಸಿ.ಚೆನ್ನಾಗಿ ಮಿಶ್ರ ಮಾಡಿಕೊಂಡು ಕಡಿಮೆ ಉರಿಯಲ್ಲಿ ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿ. 10.ಕೊತ್ತಂಬರಿ ಎಲೆಗಳಿಂದ ಅಲಂಕೃತ ಸಿಗಡಿ ತುಪ್ಪ ರೋಸ್ಟ್ ಅನ್ನು ಬಿಸಿ ಬಿಸಿಯಾಗಿ ಬಳಸಿ.