ಉದ್ಯೋಗಾಧಿಕಾರಿ ಸಿ.ಜಗನ್ನಾಥ್‍ ಗೆ ಪದೋನ್ನತಿ

19/06/2020

ಮಡಿಕೇರಿ ಜೂ.19 : ಕಳೆದ 12 ವರ್ಷಗಳಿಂದ ಜಿಲ್ಲೆಯಲ್ಲಿ ಜಿಲ್ಲಾ ಉದ್ಯೋಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿ. ಜಗನ್ನಾಥ್ ಅವರು ಸಹಾಯಕ ನಿರ್ದೇಶಕರಾಗಿ ಪದೋನ್ನತಿ ಹೊಂದಿ ಬೆಂಗಳೂರಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗಾಲಯಕ್ಕೆ ವರ್ಗಾವಣೆ ಹೊಂದಿದ್ದಾರೆ.
2008 ರ ಫೆಬ್ರವರಿ 4 ರಿಂದ 2020 ರ ಏಪ್ರಿಲ್ 2 ರ ವರೆಗೂ ಸಿ. ಜಗನ್ನಾಥ್ ಅವರು ಜಿಲ್ಲಾ ಉದ್ಯೋಗಾಧಿಕಾರಿಯಾಗಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರ ಆದೇಶದ ಮೇರೆಗೆ ಸಿ.ಜಗನ್ನಾಥ್ ಅವರು ಕೋವಿಡ್-19 ರ ನಿಯಂತ್ರಣಕ್ಕಾಗಿ ನೋಡಲ್ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದು, ಶುಕ್ರವಾರ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ 2016ರ ಜನವರಿಯಿಂದ ಡಿಸೆಂಬರ್ 2018ರ ವರೆಗೆ 2 ವರ್ಷಗಳ ಕಾಲ ಸಿ. ಜಗನ್ನಾಥ್ ಅವರು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
2018 ಮತ್ತು 2019 ರ ಪ್ರಕೃತಿ ವಿಕೋಪದ ಕಾರ್ಯದಲ್ಲಿಯೂ ನೋಡಲ್ ಅಧಿಕಾರಿಯಾಗಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಪ್ರಭಾರ ಜಿಲ್ಲಾ ಉದ್ಯೋಗಾಧಿಕಾರಿಯಾಗಿ ಸಿ.ಎಂ.ಉಮಾ ಅವರು ಕತ್ರ್ಯವ್ಯ ನಿರ್ವಹಿಸುತ್ತಿದ್ದಾರೆ.