ಚೆಟ್ಟಳ್ಳಿಯ ಶ್ರೀಭಗವತಿ ದೇವಾಲಯದಲ್ಲಿ ದೃಢ ಕಳಶ ಪೂಜೆ

19/06/2020

ಮಡಿಕೇರಿ ಜೂ.19 : ಪುನರ್ ಪ್ರತಿಷ್ಠಾಪನೆಗೊಂಡ ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದ ಸನ್ನಿದಾನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶಿಲುವಾಲಮೂಲೆ ಶ್ರೀಶಿವಸುಬ್ರಮಣಿ ಭಟ್ ಅವರ ನೇತೃತ್ವದಲ್ಲಿ ದೃಢ ಕಳಶ ಪೂಜೆ ನಡೆಯಿತು.
ಅಷ್ಟಬಂಧ ಕಲಶೋತ್ಸವ ನಡೆದ 48 ದಿನಗಳಲ್ಲಿ ದೃಢ ಕಳಶ ಪೂಜೆ ನಡೆಯಬೇಕಿತ್ತಾದರೂ ಕೊರೋನಾ ಲಾಕ್ ಡೌನ್ ನಿಂದ ನಡೆದಿರಲಿಲ್ಲ. ಇದೀಗ ಲಾಕ್ ಡೌನ್ ಸಡಿಲಿಕೆ ಇರುವುದರಿಂದ ದೇವಾಲಯ ಆಡಳಿತ ಮಂಡಳಿ ಸೀಮಿತ ಭಕ್ತರ ನಡುವೆ ಪೂಜೆ ನೆರವೇರಿಸಿದರು.