ಅಂತರರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ವಿಚಾರ ಮಂಡನೆಗೆ ಅಲ್ಲಂಗಡ ರೋಷನ್ ತಮ್ಮಯ್ಯ ಆಯ್ಕೆ

19/06/2020

ಮಡಿಕೇರಿ ಜೂ.19 : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ ಸೀನಿಯರ್ ರೋವರ್ ಮೆಟ್ ಅಲ್ಲಂಗಡ ರೋಷನ್ ತಮ್ಮಯ್ಯರವರು 20.6.2020 ರಂದು  ಮೈಸೂರಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ  “ಮಾನವ ಮತ್ತು ವನ್ಯಜೀವಿ ಸಂರ್ಘಷ ಪರಿಹಾರ” ಎಂಬ ಕಾನ್ಫರೆನ್ಸ್ ನಲ್ಲಿ ವಿಚಾರ ಮಂಡನೆಗೆ ಆಯ್ಕೆಯಾಗಿದ್ದಾರೆ.ಇವರು ಕೊಡಗಿನಲ್ಲಿ “ಆನೆ ಮತ್ತು ಮಾನವ ಸಂಘರ್ಷ” ಎಂಬ ವಿಷಯದಲ್ಲಿ ವಿಚಾರವನ್ನು ಮಂಡನೆ ಮಾಡಲಿದ್ದಾರೆ.