ಹಾಸಿಗೆ ಹಿಡಿದಿರುವ ಆಟೋ ಚಾಲಕನಿಗೆ ಸುಂಟಿಕೊಪ್ಪದ ಆಟೋ ಚಾಲಕರಿಂದ ನೆರವು

19/06/2020

ಸುಂಟಿಕೊಪ್ಪ, ಜೂ.19 : ಮರದಿಂದ ಬಿದ್ದು ಬೆನ್ನುಮೂಳೆ ಮುರಿದುಕೊಂಡು ಹಾಸಿಗೆ ಹಿಡಿದಿರುವ ಕೊಡಗರಹಳ್ಳಿಯ ಆಟೋ ಚಾಲಕ ಜಗದೀಶ ಅವರಿಗೆ ಸುಂಟಿಕೊಪ್ಪ ಆಟೋ ಚಾಲಕರು ರೂ.5,100 ಹಣವನ್ನು ಸಂಗ್ರಹಿಸಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕೊರೋನಾ ಲಾಕ್ ಡೌನ್ ಸಂದರ್ಭ ಆಟೋರಿಕ್ಷಾ ಓಡಿಸಲಾಗದೆ ಆದಾಯಕ್ಕಾಗಿ ಜಗದೀಶ್ ಅವರು ಕಾಫಿ ತೋಟಕ್ಕೆ ಮರ ಕಾಪಾತು ಮಾಡುವ ಕೆಲಸಕ್ಕೆ ತೆರಳಿದ್ದಾಗ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ಧನ ಸಹಾಯ ಮಾಡುವ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ ಸಂತೋಷ್(ದಿನು), ಉಪಾಧ್ಯಕ್ಷ ನವೀದ್, ಸುನೀಲ್, ಹರೀಶ್, ಜೀವನ್, ಕಾರ್ಯದರ್ಶಿ ಪ್ರಶಾಂತ್(ಕೋಕ) ಸಹ ಕಾರ್ಯದರ್ಶಿ ಫೆಲಿಕ್ಸ್ ಡಿಸೋಜ ಗೌರವ ಅಧ್ಯಕ್ಷ ವಿಶ್ವನಾಥ, ಚಂದ್ರ, ಖಜಾಂಚಿ ಧನಂಜಯ ಹಾಜರಿದ್ದರು.