ಅಕ್ರಮ ಗೋಸಾಗಾಟ : ಸೋಮವಾರಪೇಟೆಯ ನಂದಿಮೊಟ್ಟೆಯಲ್ಲಿ 2 ಜಾನುವಾರು ಸಹಿತ ವಾಹನ ವಶ

19/06/2020

ಸೋಮವಾರಪೇಟೆ ಜೂ.19 : ಬಿಳಿಗೇರಿ ಸಮೀಪದ ನಂದಿಮೊಟ್ಟೆ ರಸ್ತೆಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಸ್ಥಳೀಯರು ಪತ್ತೆಹಚ್ಚಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ವಾಹನ ಸಹಿತ 2 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂರ್ನಾಡು-ಕೋಡಂಬೂರು ನಿವಾಸಿ, ಅಸ್ಗರ್ ಆಲಿ ಎಂಬವರಿಗೆ ಸೇರಿದ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ನಂದಿಮೊಟ್ಟೆ ಗ್ರಾಮದ ರಾಜಾ ಎಂಬವರಿಗೆ ಸೇರಿದ 2 ಜಾನುವಾರುಗಳನ್ನು ಸಾಗಾಟಗೊಳಿಸಲು ಮುಂದಾಗುತ್ತಿದ್ದ ಸಂದರ್ಭ, ಸ್ಥಳೀಯರು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಜಾನುವಾರುಗಳನ್ನು ಭಾಗಮಂಡಲ ಗೋ ಶಾಲೆಗೆ ಸಾಗಿಸಲಾಗಿದೆ.