ಸೋಮವಾರಪೇಟೆ ಪ್ರಕರಣ : ಕದಿಯಲು ಬಂದವನೇ ಹಣ ಕಳೆದುಕೊಂಡ : ಪರ್ಸ್ ಎಲ್ಲಿತ್ತು ಗೊತ್ತಾ !

19/06/2020

ಸೋಮವಾರಪೇಟೆ ಜೂ.19 : ಕಳ್ಳತನಕ್ಕೆ ಬಂದಿದ್ದ ಕಳ್ಳನೊಬ್ಬ ತನ್ನ 988 ರೂ.ಗಳನ್ನು ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಲಾಕ್‍ಡೌನ್ ಸಂದರ್ಭ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಕೊಠಡಿಯ ಹೆಂಚು ತೆಗೆದು ಕಳ್ಳತನಕ್ಕೆ ಪ್ರಯತ್ನಪಟ್ಟು ಕೊಠಡಿಯೊಳಗೆ ಇಳಿಯಲಾಗದೆ ವಾಪಾಸ್ಸು ತೆರಳಿದ್ದಾನೆ. ಆದರೆ ಜೇಬಿನಲ್ಲಿದ್ದ ಪರ್ಸ್ ಹಂಚಿನ ಮೇಲೆಯೇ ಬಿದ್ದಿದೆ.
ಪಿ.ಯು.ಸಿ.ಪರೀಕ್ಷಾ ದಿನದಂದು ಗುರುವಾರ ಕೊಠಡಿಯ ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಯಾವದೇ ವಸ್ತು ಕಳ್ಳತನವಾಗಿಲ್ಲ. ಹೆಂಚಿನ ಮೇಲಿದ್ದ ಪರ್ಸ್ ಸಿಕ್ಕಿದೆ. ಹಣದ ಸಮೇತ ಪರ್ಸ್‍ನ್ನು ಪಟ್ಟಣದ ಪೊಲೀಸರಿಗೆ ನೀಡಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.