ಸಿಎಂ ಗೃಹ ಕಚೇರಿಗೂ ಕೊರೋನಾ ಕಾಟ

20/06/2020

ಬೆಂಗಳೂರು ಜೂ. 20 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಗೃಹ ಕಚೇರಿ ಕೃಷ್ಣಾಗೂ ಕೊರೋನಾ ಮಹಾಮಾರಿ ವಕ್ಕರಿಸಿದ್ದು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಎಲ್ಲಾ ಅಧಿಕೃತ ಸಭೆಗಳನ್ನು ವಿಧಾನಸೌಧಕ್ಕೆ ಸ್ಥಳಾಂತರಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾನ್ ಸ್ಟೇಬಲ್ ಒಬ್ಬರ ಪತಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಗೃಹ ಕಚೇರಿಗೆ ಔಷಧಿ ಸಿಂಪಡನೆ ಮಾಡಲಾಗಿತ್ತು. ಕಚೇರಿಯನ್ನು ಮುಚ್ಚಲಾಗಿದೆ.
ಸದ್ಯ ಮಹಿಳಾ ಕಾನ್ ಸ್ಟೇಬಲ್ ಗಂಟಲು ದ್ರವ್ಯವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬರಬೇಕಾಗಿದೆ. ಇನ್ನು ಇವರ ಜೊತೆಗೆ ಕಾರ್ಯ ನಿರ್ವಹಿಸಿದ ಎಲ್ಲಾ ಸಿಬ್ಬಂದಿಯನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ.