ಮಾಸ್ಕ್ ಧರಿಸದ ಸಿಂಹಗೆ ಪ್ರವೇಶವಿಲ್ಲ

20/06/2020

ಬೆಂಗಳೂರು ಜೂ.20 : ಮಾಸ್ಕ್ ಧರಿಸದೇ ವಿಧಾನಸೌಧಕ್ಕೆ ಆಗಮಿಸಿದ ಸಂಸದರ ಪ್ರವೇಶ ನಿರಾಕರಿಸಿದ ಪ್ರಸಂಗ ಜರುಗಿತು.
ವಿಧಾನಸೌಧ ಪ್ರವೇಶಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಆದರೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಮಾಸ್ಕ್ ಧರಿಸದೇ ಮುಖ್ಯಮಂತ್ರಿಗಳ ಸಭೆ ಆಗಮಿಸಿದ್ದರು.
ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದ ಸಿಬ್ಬಂದಿಗಳು ಪ್ರತಾಪ್ ಸಿಂಹ ಮಾಸ್ಕ್ ಧರಿಸದೇ ಬಂದಿರುವುದನ್ನು ಗಮನಿಸಿ ಅವರನ್ನು ತಡೆದು ಮಾಸ್ಕ್ ಧರಿಸಿಕೊಂಡು ಬರುವಂತೆಸಿಬ್ಬಂದಿ ಸೂಚಿಸಿದ್ದಾರೆ.
ಮಾಸ್ಕ್ ಇಲ್ಲದ ಕಾರಣ ಸಂಸದ ಪ್ರತಾಪ ಸಿಂಹ್ ಮುಜುಗುರದಿಂದವಾಪಸ್ ತೆರಳಿದರು.