ಕುಖ್ಯಾತ ಪಾತಕಿ ಕೊರಂಗು ಕೃಷ್ಣ ಸಾವು
20/06/2020

ಬೆಂಗಳೂರು ಜೂ. 20 : ಬೆಂಗಳೂರಿನ ಮತ್ತೋರ್ವ ಕುಖ್ಯಾತ ಪಾತಕಿ ಕೃಷ್ಣಮೂರ್ತಿ ಅಲಿಯಾಸ್ ಕೊರಂಗು ಕೃಷ್ಣ ಸಾವನ್ನಪ್ಪಿದ್ದಾನೆ. ಲೀವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಈತ ಆಂಧ್ರಪ್ರದೇಶದ ಚಿತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾನೆ ಎಂಬ ವರದಿಯಾಗಿದೆ.
ದಶಕದ ಹಿಂದೆ ಹಿರಿಯೂರು ಡಾಬದಲ್ಲಿ ಹೆಬ್ಬೆಟ್ಟು ಮಂಜ ಗ್ಯಾಂಗ್ ನಿಂದ ಕೊರಂಗೂ ಮೇಲೆ ದಾಳಿ ಆಗಿತ್ತು. ಆ ಸಂದರ್ಭದಲ್ಲಿ ಕೊರಂಗು ಕೈ ಕಟ್ ಆಗಿ ಬದುಕುಳಿದ್ದಿದ್ದ. ಇದಾದ ನಂತರ ಕೊರಂಗು ಕೃಷ್ಣಾ ಗಡಿಪಾರಾಗಿದ್ದ. 90ರ ದಶಕದಲ್ಲಿ ಭೂಗತ ಲೋಕದಲ್ಲಿ ಸಕ್ರಿಯನಾಗಿದ್ದ ಕೊರಂಗು, ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಓಂ ಚಿತ್ರದಲ್ಲಿ ನಟಿಸಿದ್ದ ರಿಯಲ್ ರೌಡಿಗಳಲ್ಲಿ ಒಬ್ಬರಾಗಿದ್ದರು.
ಚಿತ್ತೂರಿನಲ್ಲೇ ವ್ಯವಹಾರ ಮಾಡಿಕೊಂಡಿದ್ದ ಕೊರಂಗು ಕೃಷ್ಣಾ ಅನಾರೋಗ್ಯಕ್ಕೆ ತುತ್ತಾಗಿದ್ದ. ಅಲ್ಲಿಯೇ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ತೀರ್ಮಾನ ಮಾಡಿದ್ದಾರೆ.
