ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿರುವ ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತ

20/06/2020

ಸೋಮವಾರಪೇಟೆ ಕರ್ನಾಟಕದ ಕೊಡಗು ಜಿಲ್ಲೆಯ ಒಂದು ತಾಲ್ಲೂಕು.

ಮಲ್ಲಳ್ಳಿ ಜಲಪಾತ :

ಸೋಮವಾರಪೇಟೆ ತಾಲ್ಲೂಕಿನ ಪ್ರಮುಖ ಜಲಪಾತಗಳಲ್ಲಿ ಮಲ್ಲಳ್ಳಿ ಜಲಪಾತವು ಒಂದಾಗಿದೆ. ಈ ಅದ್ಭುತವಾದ ಜಲಪಾತವು ಗಂಗಾ ಮಾತೆಯಂತೆ ಕಾಣುತ್ತದೆ. ಕೊಡಗು ಜಿಲ್ಲೆಯಲ್ಲಿರುವ ಈ ಸುಂದರವಾದ ಜಲಪಾತವನ್ನು ಕಾಣಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪುಷ್ಪಗಿರಿ ಬೆಟ್ಟಗಳ ತುದಿಯಲ್ಲಿ ಈ ಜಲಪಾತವಿದ್ದು, ಸೋಮವಾರ ಪೇಟೆಯಿಂದ ಸುಮಾರು 25 ಕಿ.ಮೀ ಗಳಷ್ಟು ಅಂತರದಲ್ಲಿದೆ. ಇದು 390 ಅಡಿ ಎತ್ತರದಿಂದ ನೀರು ಬೀಳುವ ಸದ್ದು ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತದೆ.