ಮಡಿಕೇರಿಯಲ್ಲಿ ಪ್ರತಿಭಟನಾಕಾರರ ಮನವೊಲಿಸಿದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ

20/06/2020

ಮಡಿಕೇರಿ ಜೂ.20 : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ವಿರುದ್ಧ ರೈತ ಸಂಘ ಮತ್ತು ಹಸಿರುಸೇನೆ ಪ್ರಮುಖರು ಹಾಗೂ ಸದಸ್ಯರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸುವ ಸಂದರ್ಭ ರಸ್ತೆ ತಡೆ ನಡೆಸುವುದನ್ನು ಪೊಲೀಸರು ಆಕ್ಷೇಪಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ರಸ್ತೆ ತಡೆ ಪ್ರತಿಭಟನೆಯನ್ನು ಸರ್ವ ಜನರ ಹಿತಕ್ಕಾಗಿ ನಡೆಸುತ್ತಿದ್ದು, ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಮಧ್ಯ ಪ್ರವೇಶಿಸಿದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾನವ ಸರಪಳಿ ನಡೆಸುವಂತೆ ಮನವೊಲಿಸಿದರು.