ರುಚಿ ರುಚಿಯಾದ ಮೊಟ್ಟೆ ಪುಲಾವ್ ಮಾಡುವ ವಿಧಾನ

20/06/2020

ಬೇಕಾದ ಪದಾರ್ಥಗಳು :ಅನ್ನ – 2 ಕಪ್ ,  ಮೊಟ್ಟೆ- 2 , ಈರುಳ್ಳಿ- 2 (ಕತ್ತರಿಸಿದಂತಹುದು) , ಬೆಳ್ಳುಳ್ಳಿ- 4 ತುಂಡುಗಳು (ಕತ್ತರಿಸಿದಂತಹುದು) , ಟೊಮೇಟೊ – 2 (ಕತ್ತರಿಸಿದಂತಹುದು) , ಹಸಿ ಮೆಣಸಿನಕಾಯಿ- 2 (ಕತ್ತರಿಸಿದಂತಹುದು) , ತಾಜಾ ಅವರೆ ಕಾಳು – 1/4 ಕಪ್*ಅರಿಶಿನ ಪುಡಿ- 1/2 , ಖಾರದ ಪುಡಿ- 1 ಟೀ.ಚಮಚ , ಕರಿ ಮೆಣಸಿನ ಪುಡಿ – 1 ಟೀ.ಚಮಚ , ಗರಂ ಮಸಾಲ ಪುಡಿ- 1 ಟೀ.ಚಮಚ , ಉರಿದ ಎಳ್ಳಿನ ಪುಡಿ – 1 ಟೀ.ಚಮಚ , ಉಪ್ಪು- ರುಚಿಗೆ ತಕ್ಕಷ್ಟು  

ತಯಾರಿಸುವ ವಿಧಾನ :ಬಾಣಲೆಯ ಮೇಲೆ ಎಣ್ಣೆಯನ್ನು ಹಾಕಿ, ಅದರಲ್ಲಿ ಈರುಳ್ಳಿಗಳನ್ನು ಹಾಕಿಕೊಂಡು ಹೊಂಬಣ್ಣ ಬರುವವರೆಗೆ ಉರಿಯಿರಿ. ನಂತರ ಕತ್ತರಿಸಿದ ಬೆಳ್ಳುಳ್ಳಿಗಳನ್ನು ಸೇರಿಸಿ, ಕೆಲವು ಕ್ಷಣಗಳವರೆಗೆ ಉರಿಯಿರಿ. ಮೊಟ್ಟೆಗಳನ್ನು ಹುಷಾರಾಗಿ ಒಡೆದು, ಬಾಣಲೆಗೆ ಹಾಕಿ. ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡುತ್ತ ಬೇಯಿಸಿ. ಈಗ ಉಪ್ಪು, ಕರಿ ಮೆಣಸು, ಅರಿಶಿನ ಪುಡಿ, ಖಾರದ ಪುಡಿ, ಹಸಿ ಮೆಣಸಿನ ಕಾಯಿ, ಟೊಮೇಟೊಗಳನ್ನೆಲ್ಲಾ ಹಾಕಿ 3-4 ನಿಮಿಷಗಳ ಕಾಲ ಬೇಯಿಸಿ. ಇನ್ನು ಈ ಮಿಶ್ರಣಕ್ಕೆ ಅನ್ನವನ್ನು ಹಾಕಿ ಚೆನ್ನಾಗಿ ಬೆರೆಸಿ. ನಂತರ ಗರಂ ಮಸಾಲ ಪುಡಿಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದೆಲ್ಲ ಮುಗಿದ ಮೇಲೆ, ಒಲೆಯನ್ನು ಆರಿಸಿ. ಈ ಖಾದ್ಯದ ಮೇಲೆ ಎಳ್ಳು ಪುಡಿಯನ್ನು ಚಿಮುಕಿಸಿ. ಬಿಸಿಯಾಗಿರುವಾಗಲೆ ಬಡಿಸಿ. ಈಗ ನೋಡಿ ರುಚಿ ರುಚಿಯಾದ ಮೊಟ್ಟೆ ಪುಲಾವ್ ನಿಮ್ಮ ಮುಂದೆ ಸಿದ್ಧವಾಗಿರುತ್ತದೆ. ಇದನ್ನು ಸಾರಿನ ಜೊತೆಗೆ ಅಥವಾ ಸಾರಿಲ್ಲದೆ ಬೇಕಾದರು ಸೇವಿಸಬಹುದು.