ಹಾಕತ್ತೂರು ಗ್ರಾಮದಲ್ಲಿ ರಸ್ತೆ ಅಬಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

20/06/2020

ಮಡಿಕೇರಿ ಜೂ.20 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಹಾಕತ್ತೂರು ಗ್ರಾಮ ಪಂಚಾಯತಿ ತೊಂಬತ್ತು ಮನೆ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿದರು.
ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ತಾ.ಪಂ. ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್ ಹಾಗೂ ಸದಸ್ಯರಾದ ಕುಮುದ ಧರ್ಮಪ್ಪ, ಗ್ರಾ.ಪಂ. ಅಧ್ಯಕ್ಷರಾದ ಶಾರದ, ಸದಸ್ಯರಾದ ದೇವಿಪ್ರಸಾದ, ಅಬಿವೃದ್ಧಿ ಅಧಿಕಾರಿ ದಿನೇಶ್, ಹಾಕತ್ತೂರು ವಿಎಸ್‍ಎಸ್‍ಎನ್ ನಿರ್ದೇಶಕರಾದ ಪಳಂಗಪ್ಪ, ತ್ರೀನೇತ್ರ ಯುವಕ ಸಂಘದ ಅಧ್ಯಕ್ಷರಾದ ಪಿ.ಪಿ.ಸುಕುಮಾರ ಇತರರು ಇದ್ದರು.
ಜಿ.ಪಂ. ಹಾಗೂ ಶಾಸಕರ ಅನುದಾನ ಸೇರಿದಂತೆ 43 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ, 2 ಲಕ್ಷ ರೂ. ವೆಚ್ಚದಲ್ಲಿ ತಡಗೋಡೆ ಹಾಗೂ ಲೋಕೋಪಯೋಗಿ ಸೇರಿದಂತೆ 29 ಲಕ್ಷ ರೂ. ವೆಚ್ಚದ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು.