ಎಸ್.ಕೆ.ಎಸ್.ಎಸ್.ಎಫ್ ಮರಳಿ ಗೂಡಿಗೆ ಸಾಂತ್ವನ ಕಾರ್ಯಕ್ರಮ

21/06/2020

ಮಡಿಕೇರಿ ಜೂ.21 : ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ, ಯು.ಎ.ಇ ಹಾಗೂ ಎಸ್.ಕೆ.ಎಸ್.ಎಸ್.ಎಫ್, ಜಿ.ಸಿ.ಸಿ ಕೊಡಗು ಜಿಲ್ಲಾ ಘಟಕದ ಸಹಭಾಗಿತ್ವದಲ್ಲಿ, ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಗಲ್ಫ್ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ ಸಲುವಾಗಿ “ಮರಳಿ ಗೂಡಿಗೆ ಸಾಂತ್ವನ” ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ.
ಇದರ ಮೊದಲ ಭಾಗವಾಗಿ ಯು.ಎ.ಇ ಯಿಂದ ಎಸ್.ಕೆ.ಎಸ್.ಎಸ್.ಎಫ್ ಸಹಯೋಗದೊಂದಿಗೆ ವಿಮಾನವು ಶೀಘ್ರವೇ ಮಂಗಳೂರಿಗೆ ಪ್ರಯಾಣ ಮಾಡಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿ.ಸಿ.ಸಿ ಘಟಕದ ಅಧ್ಯಕ್ಷರಾದ ಹುಸೈನ್ ಫೈಝಿ ತಿಳಿಸಿದ್ದಾರೆ.
ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿದವರನ್ನು ಮಾತ್ರ ಪರಿಗಣನೆ ಮಾಡಲಾಗುವುದು. ಇಂಡಿಯನ್ ಕಾನ್ಸುಲೇಟ್ ಸೈಟ್ ನಲ್ಲಿ ರಿಜಿಸ್ಟರ್ ಮಾಡದವರನ್ನು ಪರಿಗಣಿಸುವುದಿಲ್ಲ ಎಂದು ಹುಸೈನ್ ಫೈಝಿ ಸ್ಪಷ್ಟಪಡಿಸಿದ್ದಾರೆ.
ಟಿಕೆಟ್ ದರ 1150 ದಿರ್ಹಮ್ ಆಗಿದ್ದು, ಯಾತ್ರೆ ದಿನಾಂಕ ಬಗ್ಗೆ ಅಧಿಕೃತವಾಗಿ ತಿಳಿಸಲಾಗುವುದು. ಸರಕಾರದ ನಿಯಮದಂತೆ ಕ್ವಾರಂಟೈನ್ ವ್ಯವಸ್ಥೆಗೆ ಬದ್ಧರಾಗಿರಬೇಕಾಗುತ್ತದೆ ಹಾಗೂ ಕರ್ನಾಟಕÀ ರಾಜ್ಯದವರಿಗೆ ಮೊದಲ ಆದ್ಯತೆ ನೀಡಲಾಗುವುದೆಂದು ಹುಸೈನ್ ಫೈಝಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ. 971 55 949 8960, 971543454684, 971565063450