ಗ್ರಹಣ ಪರಿಣಾಮ : ಸುಂಟಿಕೊಪ್ಪ ಸಂತೆಯಲ್ಲಿ ಮಾಂಸದ ದರ ದಿಢೀರ್ ಕುಸಿತ

21/06/2020

ಮಡಿಕೇರಿ ಜೂ.21 : ಕೊರೋನಾ ಲಾಕ್‍ಡೌನ್ ಸಡಿಲಿಕೆಯಾದ ನಂತರ ಗಗನಕ್ಕೇರಿದ್ದ ಮಾಂಸದ ಬೆಲೆ ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪದಲ್ಲಿ ದಿಢೀರ್ ಆಗಿ ಕುಸಿತ ಕಂಡಿತು. ಸೂರ್ಯ ಗ್ರಹಣವಿದ್ದ ಕಾರಣ ಮೀನು, ಮಾಂಸ ಕೊಳ್ಳುವರಿಲ್ಲದೆ ನಷ್ಟ ಅನುಭವಿಸುವ ಆತಂಕದಲ್ಲಿ ಮಾಂಸ ವ್ಯಾಪಾರಿಗಳು ದರ ಕಡಿತಗೊಳಿಸಿದರು.
ಸಂತೆ ದಿನವಾದ ಸೂರ್ಯಗ್ರಹಣದ ಹಿನ್ನಲೆಯಲ್ಲಿ ಕೋಳಿ ಮಾಂಸ ಪ್ರಿಯರಿಗೆ ಕಡಿಮೆ ದರದಲ್ಲಿ ಕೋಳಿ, ಕುರಿ ಮಾಂಸಗಳಿಗೆ ಲಭಿಸಿದ್ದು, ಕುಕ್ಕುಟ ಪ್ರಿಯರಿಗೆ ಸಂತಸ ತಂದಿದೆ.
ಈ ಹಿಂದೆ ಕೋಳಿ ಮಾಂಸದ ಬೆಲೆ ಕೆಜಿಗೆ 220 ರೂ. ಮತ್ತು ಕುರಿಮಾಂಸ 600 ರೂ. ಗೆ ಮಾರಾಟವಾಗುತ್ತಿತ್ತು. ಆದರೆ ಇಂದು ಕುರಿ ಮಾಂಸ 450 ಹಾಗೂ ಕೋಳಿ ಮಾಂಸಕ್ಕೆ 100 ರಿಂದ 120 ರೂ. ರವರೆÀಗೆ ಮಾರಾಟವಾಯಿತು. ಗ್ರಹಣದ ಕಾರಣ ತರಕಾರಿ ಖರೀದಿಸುವವರ ಸಂಖ್ಯೆಯೂ ಕಡಿಮೆ ಇತ್ತು.