ಜೂನ್ 24 ರ ವರೆಗೆ ಶ್ರಮಿಕ‌ ರೈಲು ಲಭ್ಯ : ಹೆಸರು ನೋಂದಾಯಿಸಲು 8550001077 ಗೆ ವಾಟ್ಸಪ್ ಮಾಡಿ

21/06/2020

ಕೋವಿಡ್-19 ರ ಸಂಬಂಧ ಸಿಲುಕಿರುವ ಎಲ್ಲಾ ವಲಸೆ ಕಾರ್ಮಿಕರನ್ನು ರೈಲು, ಬಸ್ ಅಥವಾ ಇತರ ಸಾರಿಗೆ ವಿಧಾನಗಳ ಮೂಲಕ ಕಳುಹಿಸಲು ಕರ್ನಾಟಕದಿಂದ ಶ್ರಮಿಕ್  ರೈಲುಗಳು ಜೂನ್ 24 ರ ವರೆಗೆ ಲಭ್ಯವಿರುತ್ತವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.ಆದ್ದರಿಂದ ಕೊಡಗು ಜಿಲ್ಲೆಯಲ್ಲಿ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಅವರವರ ಸ್ವಂತ ಊರುಗಳಿಗೆ ತೆರಳಲು ಬಾಕಿ ಇದ್ದಲ್ಲಿಜಿಲ್ಲಾಧಿಕಾರಿಗಳ ಕಚೇರಿ 24×7 ನಿಯಂತ್ರಣಾ ಕೊಠಡಿ ದೂರವಾಣಿ ಸಂ:08272-221077 ಟೋಲ್ ಫ್ರೀ ಸಂ: 1077 ವಾಟ್ಸಪ್ ಸಂ: 8550001077 ಇಲ್ಲಿ ಪೂರ್ಣ ಮಾಹಿತಿಯೊಂದಿಗೆ ಹೆಸರು  ನೋಂದಾಯಿಸಬೇಕಾಗಿ ಜಿಲ್ಲಾಧಿಕಾರಿ ಅವರು ಕೋರಿದ್ದಾರೆ.