ಕೊಡಗು ಕೋವಿಡ್ ಆಸ್ಪತ್ರೆಯಲ್ಲಿ 53 ಮಂದಿ ದಾಖಲು

June 21, 2020

ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 
      ಇತರೆ ದೇಶ/ರಾಜ್ಯಗಳಿಂದ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. 
*ಇತರೆ ದೇಶ/ರಾಜ್ಯ/ಜಿಲ್ಲೆಗಳಿಂದ ಕಳೆದ 14 ದಿನಗಳಲ್ಲಿ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರ ಪೈಕಿ ಸಂಪರ್ಕ ತಡೆಯಲ್ಲಿರುವ ಜನರ ವಿವರ ಕೆಳಕಂಡಂತಿದೆ.*
1. ಇತರೆ ದೇಶದ  ಜನರು- 072. ಇತರೆ ರಾಜ್ಯದ ಜನರು-4583. ಒಟ್ಟು ಜನರು-465
ಪ್ರಯೋಗಾಲಯ ಪರೀಕ್ಷಾ ವರದಿ ವಿವರ:

*ಇಲ್ಲಿಯವರೆಗೆ ಒಟ್ಟು 5538 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.* • ಪಾಸಿಟಿವ್ ಪ್ರಕರಣಗಳು- 03 (ಒಬ್ಬರು ಗುಣಮುಖರಾಗಿದ್ದಾರೆ)• ನೆಗೆಟಿವ್ ವರದಿ ಬಂದ ಪ್ರಕರಣಗಳು-5255 • ವರದಿ ನಿರೀಕ್ಷಿತ ಪ್ರಕರಣಗಳು-280
*ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ  ದಾಖಲಿರುವ ಪ್ರಕರಣಗಳು:*          ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ  53  ಜನರು ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.

error: Content is protected !!