ಚೂರಿಕಾಡುವಿನಲ್ಲಿ ಮರಿಯಾನೆಯೊಂದಿಗೆ ಆರು ಕಾಡಾನೆಗಳ ಉಪಟಳ : ಗ್ರಾಮಸ್ಥರಲ್ಲಿ ಆತಂಕ

21/06/2020

ಮಡಿಕೇರಿ ಜೂ.21 : ಮಡಿಕೇರಿ ಸಮೀಪದ ಹಾಕತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೂರಿಕಾಡುವಿನಲ್ಲಿ ಕಳೆದ ಕೆಲವು ದಿನಗಳಿಂದ ಒಂದು ಮರಿ ಆನೆ ಸಹಿತ ಒಟ್ಟು ಆರು ಕಾಡಾನೆಗಳು ಬೀಡು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ನಾಚಿಯಪ್ಪನ್, ರಂಜಿನಿ ಅಮ್ಮಣ್ಣ ಹಾಗೂ ಖಾಲಿದ್ ಎಂಬುವವರ ತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ಅಪಾರ ಪ್ರಮಾಣದ ಬಾಳೆ, ಅಡಿಕೆ, ತೆಂಗಿನಮರ ಸಹಿತ ಕೃಷಿ ಫಸಲನ್ನ ನಾಶ ಮಾಡಿದೆ.
ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಆಗಮಿಸಿ ಸಿಡಿಮದ್ದು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿ ಕಾಡಿಗಟ್ಟಲು ಶ್ರಮಿಸಿದರೂ ಕಾಡಾನೆಗಳು ಮಾತ್ರ ಊರು ಬಿಟ್ಟು ಕದಲುತ್ತಿಲ್ಲ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವರದಿ : ಪಿ.ಪಿ.ಸುಕುಮಾರ್, ಹಾಕತ್ತೂರು.