ಖಂಡಗ್ರಾಸ ಸೂರ್ಯಗ್ರಹಣ ಗೋಚರ

22/06/2020

ಬೆಂಗಳೂರು ಜೂ.22 : ರಾಜ್ಯದ ಹಲವೆಡೆ ವರ್ಷದ ಮೊದಲ ಖಂಡಗ್ರಾಸ ಸೂರ್ಯಗ್ರಹಣ ಗೋಚರವಾಗಿದೆ. ಬೆಳಿಗ್ಗೆ 10ಗಂಟೆ 5 ನಿಮಿಷಕ್ಕೆ ಆರಂಭಗೊಂಡ ಈ ಸೂರ್ಯಗ್ರಹಣ ಮಧ್ಯಾಹ್ನ 1.31ರವರೆಗೆ ಗೋಚರಿಸಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮುಂಬಾರು ಅಬ್ಬರಿಸುತ್ತಿದ್ದು, ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇರುವುದರಿಂದ ಸೂರ್ಯ ಮೋಡದ ಮರೆಯಿಂದ ಆಗಾಗ ಹೊರಬಂದು ಕಾಣಿಸುತ್ತಿದ್ದಾರೆ.
ಬೆಳಿಗ್ಗೆ 10 ಗಂಟೆ 5 ನಿಮಿಷಕ್ಕೆ ಆರಂಭವಾದ ವಿಸ್ಮಯ ಕಂಕಣ ಸೂರ್ಯಗ್ರಹಣವನ್ನು ಲಕ್ಷಾಂತರ ಜನರು ವೀಕ್ಷಣೆ ಮಾಡುತ್ತಿದ್ದಾರೆ.
ಕಳೆದ ಡಿಸೆಂಬರ್ 26 ಕಂಕಣ ಸೂರ್ಯಗ್ರಹಣ ಹಾಗೂ ಇಂದಿನ ಗ್ರಹಣ ಶತಮಾನಕ್ಕೊಮ್ಮೆ ಬರುವಂತಹದ್ದಾಗಿದ್ದು, ಹತ್ತು ವರ್ಷಗಳಲ್ಲೊಮ್ಮೆ ಪಾಶ್ರ್ವ ಸೂರ್ಯಗ್ರಹಣ ಸಂಭವಿಸಿದರೆ ಇನ್ನು ಮತ್ತೆ ಈ ಕಂಕಣ ಸೂರ್ಯಗ್ರಹಣ 2064ಕ್ಕೆ ಕಾಣಿಸಿಕೊಳ್ಳುತ್ತದೆ ಎಂದು ಭೌತ ವಿಜ್ಞಾನಿಗಳು ಹೇಳಿದ್ದಾರೆಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.