ಆರೋಗ್ಯಕರವಾದ ಲಿಂಬೆ ಚಹಾ ಮಾಡುವ ವಿಧಾನ
22/06/2020

ಸಾಮಾಗ್ರಿಗಳು :ಕಪ್ಪು ಚಹಾ ಎಲೆಗಳು – 1 ಟೇಸ್ಫೂನ್ (ನೀವು ಚಹಾ ಬ್ಯಾಗ್ಗಳನ್ನು ಕೂಡ ಬಳಸಬಹುದು) ಲಿಂಬೆ – 1 ಏಲಕ್ಕಿ -1/2 ಇಂಚಿನ ಕೋಲು ಜೇನು – 1/2 ಟೇಸ್ಪೂನ್ ಲಿಂಬೆ ಹೋಳು – 5-6 (ಅಲಂಕಾರಕ್ಕಾಗಿ)
ಮಾಡುವ ವಿಧಾನ:
- ಚಹಾ ಪಾತ್ರೆಯಲ್ಲಿ ನೀರನ್ನು ಇಡಿ.
- ಕಪ್ಪು ಚಹಾ ಎಲೆಗಳನ್ನು ಸೇರಿಸಿ ಅಥವಾ ಚಹಾ ಬ್ಯಾಗನ್ನು ಮುಳುಗಿಸಿ
- ಲಿಂಬೆ ರಸ, ಜೇನು ಮತ್ತು ಏಲಕ್ಕಿಯನ್ನು ಚಹಾ ಪಾತ್ರೆಗೆ ಹಾಕಿ.
- ಮೂರು ನಿಮಿಷಗಳಷ್ಟು ಕಾಲ ಕುದಿಸಿ.
- ಚೆನ್ನಾಗಿ ಕುದಿದ ನಂತರ, ಕಪ್ಗೆ ಸೋಸಿ ಮತ್ತು ಲಿಂಬೆ ಹೋಳುಗಳಿಂದ ಅಲಂಕರಿಸಿ.
- ಲಿಂಬೆ ಚಹಾ ಸವಿಯಲು ಸಿದ್ಧವಾಗಿದೆ.
- ಈ ತೂಕ ಇಳಿಸುವ ಪೇಯವನ್ನು ಬಿಸಿ ಇಲ್ಲವೇ ತಣ್ಣಗೆ ಸವಿಯಬಹುದು. ಇದು ಕೊಬ್ಬಿನ ಅಂಶಗಳನ್ನು ದೇಹದಿಂದ ತೊಡೆದುಹಾಕಿ ಗಂಟಲನ್ನು ಸೋಂಕಿನಿಂದ ರಕ್ಷಿಸುತ್ತದೆ.
