ನಾಪೋಕ್ಲುವಿನ ಹಿರಿಯ ಪತ್ರಕರ್ತ ಎಂ.ಕೆ.ನಝೀರ್ ನಿಧನ

22/06/2020

ಮಡಿಕೇರಿ ಜೂ.22 : ಕೊಡಗಿನ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿದ್ದ ನಾಪೋಕ್ಲು ನಿವಾಸಿ ಎಂ.ಕೆ.ನಝೀರ್(70) ಅವರು ಸೋಮವಾರ ನಿಧನ ಹೊಂದಿದರು.
ಕೊಡಗಿನ ‘ಶಕ್ತಿ’ ಪತ್ರಿಕೆಯ ವರದಿಗಾರರಾಗಿದ್ದ ಅವರು, ನಾಪೋಕ್ಲು ವಿಭಾಗದಿಂದ ಇತರ ರಾಜ್ಯಮಟ್ಟದ ಪತ್ರಿಕೆಗಳಿಗೂ ಸುದ್ದಿಯ ಮೂಲವಾಗಿದ್ದರು. ಹತ್ತು ಹಲವು ಸಂಘಸಂಸ್ಥೆಗಳಲ್ಲೂ ನಝೀರ್ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.