ಅಯ್ಯಂಗೇರಿಯ ಹೊಟೇಲ್ ಉದ್ಯಮಿಯನ್ನು ಕಾಡಿದ ಸೋಂಕು

22/06/2020

ಮಡಿಕೇರಿ ಜೂ.22 : ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮ ಮೂಲದ 26 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಹೊಟೇಲ್ ಉದ್ಯಮಿಯಾಗಿರುವ ಇವರು ಮುಂಬೈನಿಂದ ಮಂಗಳೂರಿಗಾಗಿ ಕೊಡಗು ಜಿಲ್ಲೆಗೆ ಬಂದಿದ್ದರು. ಮಂಗಳೂರಿನವರೆಗೆ ಖಾಸಗಿ ಬಸ್ ನಲ್ಲಿ ಮುಂಬೈನಿಂದ ಬಂದು ಅಲ್ಲಿಂದ ಮಡಿಕೇರಿಗೆ ಸರ್ಕಾರಿ ಬಸ್ ನಲ್ಲಿ ಬಂದಿದ್ದಾರೆ. ಅವರು ಕೊವೀಡ್ ಆಸ್ಪತ್ರೆಗೆ ನೇರವಾಗಿ ಬಂದು ಪರೀಕ್ಷೆ ನಡೆಸಿದ್ದರಿಂದಾಗಿ ಕೊಡಗು ಜಿಲ್ಲೆಯಲ್ಲಿ ಇವರಿಗೆ ಇತರರ ಸಂಪರ್ಕ ಉಂಟಾಗಿರುವ ಸಾಧ್ಯತೆ ಕಡಮೆಯಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು.
ಬಸ್ ಪ್ರಯಾಣಿಕರ ಮಾಹಿತಿ ಕಲೆ ಹಾಕಲಾಗುತ್ತಿದ್ದು ಅವರನ್ನೂ ಮುಂದಿನ ದಿನಗಳಲ್ಲಿ ತಪಾಸಣೆಗೊಳಪಡಿಸಲಾಗುತ್ತದೆ ಎಂದರು.