ಸೋಮವಾರಪೇಟೆಯ ಶಿರಂಗಾಲ ಮತ್ತು ದೊಡ್ಡಳ್ಳಿ ಗ್ರಾಮ ನಿಯಂತ್ರಿತ ಪ್ರದೇಶ

June 23, 2020

ಮಡಿಕೇರಿ ಜೂ.23 : ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಮೂವರು ಕೊರೋನಾ ಸೋಂಕಿತರು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಗಳು ವಾಸವಾಗಿದ್ದ ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮದ 30 ಮನೆಗಳಲ್ಲಿ 122 ಮಂದಿ ವಾಸವಿರುವ ಪ್ರದೇಶವನ್ನು ಮತ್ತು ಶನಿವಾರಸಂತೆ ಹೋಬಳಿ ಆಲೂರು ವೃತ್ತದ ದೊಡ್ಡಳ್ಳಿ ಗ್ರಾಮದಲ್ಲಿರುವ 37 ಮನೆಗಳಲ್ಲಿ 137 ಮಂದಿ ವಾಸವಿರುವ ಪ್ರದೇಶವನ್ನು ಸೀಲ್ ಡೌನ್ ಮಾಡಿ, ನಿಯಂತ್ರಿತ ಪ್ರದೇಶವೆಂದು (Containment Zone) ಘೋಷಿಸಲಾಗಿದೆ.

ನಿಯಂತ್ರಿತ ಪ್ರದೇಶದ ಜನರಿಗೆ ದಿನ ಬಳಕೆಯ ವಸ್ತುಗಳನ್ನು ಜಿಲ್ಲಾಡಳಿತದಿಂದ ಪೂರೈಸಲಾಗುವುದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

error: Content is protected !!