ಲೆಜೆಂಡ್ ಅಂಡರ್ ಟೇಕರ್ ವಿದಾಯ

June 23, 2020

ನವದೆಹಲಿ ಜೂ.23 : ಡಬ್ಲ್ಯುಡಬ್ಲ್ಯುಇ ಲೆಜೆಂಡ್ ಅಂಡರ್ ಟೇಕರ್ ತನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ದಿ ಡೆಡ್ಲಿಮ್ಯಾನ್ ಖ್ಯಾತಿಯ 52 ವರ್ಷದ ಅಂಡರ್ ಟೇಕರ್ ಅವರು ದಿ ಲಾಸ್ಟ್ ರೈಡ್ ಶೋನಲ್ಲಿ ತಮ್ಮ 30 ವರ್ಷಗಳ ಸುದೀರ್ಘ ಕುಸ್ತಿ ಪಯಣಕ್ಕೆ ವಿದಾಯ ಹೇಳಿದ್ದಾರೆ.
ಅಂಡರ್ ಟೇಕರ್ ಅವರು 1965 ಮಾರ್ಚ್ 24ರಂದು ಅಮೆರಿಕಾದ ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಜನಿಸಿದ್ದರು. 6.10 ಅಡಿ ಉದ್ದ ಅಂಡರ್ ಟೇಕರ್ ಅವರು 1990ರಲ್ಲಿ ಸರ್ವೈವರ್ ಸಿರೀಸ್ ಮೂಲಕ ಡಬ್ಲ್ಯುಡಬ್ಲ್ಯುಇಗೆ ಕಾಲಿಟ್ಟಿದ್ದರು. ನಂತರ ಅವರ ಅತೀ ಜನಪ್ರಿಯ ಪಟುಗಳಲ್ಲಿ ಒಬ್ಬರಾಗಿದ್ದಾರೆ.
ಅಂಡರ್ ಟೇಕರ್ 3 ಬಾರಿ ಹೆವಿವೈಟ್ ಚಾಂಪಿಯನ್, 4 ಬಾರಿ ಡಬ್ಲ್ಯುಡಬ್ಲ್ಯುಇ ಚಾಂಪಿಯನ್, ಒಂದು ಬಾರಿ ಹಾರ್ಡ್ ಕೋರ್ ಚಾಂಪಿಯನ್ ಶಿಪ್ ಜಯಿಸಿದ್ದಾರೆ.

error: Content is protected !!