ಸ್ವಯಂ ಪ್ರೇರಿತವಾಗಿ ಚಿಕಿತ್ಸೆಗೆ ಒಳಪಡಲು ನೀಡಲು ಮನವಿ

June 23, 2020

ಮಡಿಕೇರಿ ಜೂ.23 : ಕೋವಿಡ್-19 ರ ಸಂಬಂಧ ಜೂನ್, 22 ರಂದು ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ ಶಿರಂಗಾಲ ಗ್ರಾಮದ ವ್ಯಾಪಾರಿಯೊಬ್ಬರು ಜೂನ್, 22 ರಂದು ಬೆಳಗ್ಗೆ 3 ಗಂಟೆಯಿಂದ 7 ಗಂಟೆಯವರೆಗೆ ಸೋಮವಾರಪೇಟೆಯ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಿರುತ್ತಾರೆ. ಬೆಳಿಗ್ಗೆ 3 ಗಂಟೆಯಿಂದ 7 ಗಂಟೆಯ ಅವಧಿಯಲ್ಲಿ ಸೋಮವಾರಪೇಟೆ ಮಾರುಕಟ್ಟೆಯಲ್ಲಿದ್ದವರು ಸ್ವಯಂಪ್ರೇರಿತರಾಗಿ ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಗಂಟಲು/ಮೂಗು ದ್ರವ ಮಾದರಿಯನ್ನು ನೀಡಲು ಜಿಲ್ಲಾಡಳಿತ ಕೋರಿದೆ. ಗಂಟಲು/ಮೂಗು ದ್ರವ ಮಾದರಿಯ ಸಂಗ್ರಹಣೆ ಬಳಿಕ ಅವರನ್ನು ಅವರವರ ಮನೆಗಳಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

 

error: Content is protected !!