ಸೋಮವಾರಪೇಟೆಯಲ್ಲಿ ಕೊರೋನಾ ವೈರಸ್ ಬಗ್ಗೆ ಅರಿವು ಕಾರ್ಯಕ್ರಮ

June 23, 2020

ಸೋಮವಾರಪೇಟೆ ಜೂ. 23 : ಪಟ್ಟಣ ಪಂಚಾಯಿತಿ ವತಿಯಿಂದ ಕೋವಿಡ್-19 ವೈರಸ್ ತಡೆ ಜಾಗೃತಿ ಜಾಥ ಪಟ್ಟಣದಲ್ಲಿ ನಡೆಯಿತು.
ಮುಖ್ಯಾಧಿಕಾರಿ ನಾಚಪ್ಪ ನೇತೃತ್ವದ ತಂಡ, ಅಂಗಡಿ ಹೋಟೆಲ್ ಹಾಗು ಸರ್ಕಾರಿ ಕಚೇರಿಗಳಿಗೆ ತೆರಳಿ ಪರಿಶೀಲಿಸಿ ಸಲಹೆ ನೀಡಲಾಯಿತು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂಗಡಿ, ಹೋಟೆಲ್‍ನಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇಡಬೇಕು ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದರು.

error: Content is protected !!