ಹಾವು ಕಡಿದು ಮಹಿಳೆ ಸಾವು : ಹಾನಗಲ್ಲು ಗ್ರಾಮದಲ್ಲಿ ಘಟನೆ

23/06/2020

ಸೋಮವಾರಪೇಟೆ ಜೂ. 23 : ನಾಗರಹಾವು ಕಚ್ಚಿ ಮಹಿಳೆ ಮೃತಪಟ್ಟಿರುವ ಘಟನೆ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ.
ಪಾರ್ವತಮ್ಮ(68) ಮೃತಪಟ್ಟವರು. ಸಹೋದರ ಕುಶಾಲಪ್ಪ ಗದ್ದೆಯಲ್ಲಿ ಜೋಡೆತ್ತುಗಳಿಗೆ ಹುಲ್ಲು ತಿನ್ನಿಸುತ್ತಿದ್ದಾಗ ನಾಗರಹಾವು ಕಚ್ಚಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಅವಿವಾಹಿತರಾಗಿದ್ದು, ಸಹೋದರಿ ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ ಅವರನ್ನು ಅಗಲಿದ್ದಾರೆ.