ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೊರೋನಾ ವಾರಿಯರ್ಸ್‍ಗೆ ಸನ್ಮಾನ

23/06/2020

ಸುಂಟಿಕೊಪ್ಪ,ಜೂ.23: ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದವತಿಯಿಂದ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತರಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು.
ಮಡಿಕೇರಿ ಕ್ಷೇತ್ರ ಶಾಸಕರೂ, ಈ ಸಂಘದ ಮಾಜಿ ಅಧ್ಯಕ್ಷರೂ ಹಾಗೂ ಸದಸ್ಯರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸಹಕಾರ ಸಂಘದವತಿಯಿಂದ 7 ಮಂದಿ ಆಶಾ ಕಾರ್ಯಕರ್ತರಿಗೆ ತಲಾ 2,500 ರೂಗಳನ್ನು ಅವರು ವಿತರಿಸಿ ಮಾತನಾಡಿದ ಅವರು ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾಗಿದೆ ಹಗಲು ರಾತ್ರಿ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊವೀಡ್ 19 ಮಹಾಮಾರಿಯನ್ನು ಹೆಗಲ ಮೇಲೆ ಹೊತುಕೊಂಡು ಸಮಾಜದ ರೋಗಿಗಳನ್ನು ಹಾರೈಕೆ ಮಾಡುತ್ತಾ ಸೆಔಎ ಸಲ್ಲಿಸುತ್ತಿರುವುದನ್ನು ಆರೋಗ್ಯ ಇಲಾಖೆಯವರು ಸಹ ಗಮನಿಸಿದ್ದು, ಅವರ ಸೇವೆಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಕೈಜೋಡಿಸುವಂತೆ ಕರೆನೀಡಿದರು.
ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿಜಂಡ ಸುಬ್ರಮಣಿ ಮೊಣ್ಣಪ್ಪ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಸ್ವಾಗತ ಬಯಸಿ ಶುಭಕೋರಿದರು.
ಸಮಾರಂಭದ ವೇದಿಕೆಯಲ್ಲಿ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಕೃಷಿ ಪತ್ತಿನ ಸಹಕಾರ ಸಂಘದ ತಿಲಕ್ ಕುಮಾರ್, ನಿರ್ದೇಶಕರುಗಳಾದ ನಾಪ್ಪಂಡ ಉಮೇಶ್ ಉತ್ತಪ್ಪ, ಎನ್.ಎಸ್. ಬೆಳ್ಯಪ್ಪ, ತಮ್ಮಯ್ಯ, ಡಿ.ಎನ್.ಧೂಮಪ್ಪ, ಕೆ.ಎ.ಲತೀಫ್ ಜೆ.ಆರ್.ಕೃಷ್ಣಪ್ಪ, ಎಂ.ವೈ.ಕೇಶವ, ಸಂಘದ ಲೆಕ್ಕಪರಿಶೋಧಕರಾದ ಬಿ.ಎಸ್.ಹರೀಶ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಸಭಾ ಖಾರ್ಯಕ್ರಮವನ್ನು ಸಹಕಾರ ಸಂಘದ ಕಾರ್ಯನಿರ್ವಾಹಣ ಅಧಿಕಾರಿಗಳಾದ ಬಿ.ಎಸ್.ಕಾವೇರಪ್ಪ ಅವರು ನಿರೂಪಿಸಿ ವಂದಿಸಿದರು.