ಸೋಮವಾರಪೇಟೆ ಮಾರುಕಟ್ಟೆಯಲ್ಲಿದ್ದವರು ಸ್ವಯಂಪ್ರೇರಿತರಾಗಿ ದ್ರವ ಪರೀಕ್ಷೆಗೆ ಒಳಪಡಲು ಜಿಲ್ಲಾಡಳಿತ ಮನವಿ

23/06/2020

ಮಡಿಕೇರಿ ಜೂ.23 : ಕೋವಿಡ್-19 ರ ಸಂಬಂಧ ಜೂ.22 ರಂದು ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ ಶಿರಂಗಾಲ ಗ್ರಾಮದ ವ್ಯಾಪಾರಿಯೊಬ್ಬರು ಜೂ.22 ರಂದು ಬೆಳಗ್ಗೆ 3 ಗಂಟೆಯಿಂದ 7 ಗಂಟೆಯವರೆಗೆ ಸೋಮವಾರಪೇಟೆಯ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಿದ್ದಾರೆ. ಬೆಳಗ್ಗೆ 3 ಗಂಟೆಯಿಂದ 7 ಗಂಟೆಯ ಅವಧಿಯಲ್ಲಿ ಸೋಮವಾರಪೇಟೆ ಮಾರುಕಟ್ಟೆಯಲ್ಲಿದ್ದವರು ಸ್ವಯಂಪ್ರೇರಿತರಾಗಿ ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಗಂಟಲು/ಮೂಗು ದ್ರವ ಮಾದರಿಯನ್ನು ನೀಡಲು ಜಿಲ್ಲಾಡಳಿತ ಕೋರಿದೆ. ಗಂಟಲು/ಮೂಗು ದ್ರವ ಮಾದರಿಯ ಸಂಗ್ರಹಣೆ ಬಳಿಕ ಅವರನ್ನು ಅವರವರ ಮನೆಗಳಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.