ಸೋಮವಾರಪೇಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದಿಂದ ವಿವಿಧ ಇಲಾಖೆಯ ಚಾಲಕರುಗಳಿಗೆ ಸನ್ಮಾನ

24/06/2020

ಮಡಿಕೇರಿ ಜೂ. 24 : ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ವಿವಿಧ ಇಲಾಖೆಯ ಚಾಲಕರುಗಳಿಗೆ ಚೈತನ್ಯೋಭವ ಸನ್ಮಾನ ಕಾರ್ಯಕ್ರಮ ನಡೆಯಿತು.

ಸೋಮವಾರಪೇಟೆ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೋನಾ ಲಾಕ್‍ಡೌನ್ ಸಂದರ್ಭ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸಿದ ಸೋಮವಾರಪೇಟೆಯ ವಿವಿಧ ಇಲಾಖೆಯ ಚಾಲಕರುಗಳಾದ ಪ.ಪಂ ಚಾಲಕರುಗಳಾದ ಶೇಖರ್, ಆದೀಲ್, ತುರ್ತುವಾಹದನದ ಚಾಲಕರಾದ ನಂಜಪ್ಪ ಅರುಣ್ ಕುಮಾರ್, ಸೋಮವಾರಪೇಟೆ ಆರಕ್ಷಕ ಠಾಣೆಯ ಚಾಲಕ ಕುಮಾರ್, ಪೋಲೀಸ್ ವೃತ್ತ ನಿರೀಕ್ಷಕರ ಕಛೇರಿಯ ಚಾಲಕ ನದಾಫ್, ತಹಶೀಲ್ದಾರ್ ಕಛೇರಿಯ ಚಾಲಕ ರತನ್ ಲಾಲ್ ಹಾಗೂ ಕಿರಣ್, ದಿವಾಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.