ನಿಯಮ ಉಲ್ಲಂಘನೆ : ಗೃಹ ಸಂಪರ್ಕ ತಡೆಯ ಜನರನ್ನು ಸಾಂಸ್ಥಿಕ ಸಂಪರ್ಕ ತಡೆಗೆ ಸ್ಥಳಾಂತರ

June 24, 2020

ಮಡಿಕೇರಿ ಜೂ. 24 : ಕೋವಿಡ್-19 ರ ಸಂಬಂಧ ವಿದೇಶ ಮತ್ತು ಅಂತರ ರಾಜ್ಯಗಳಿಂದ ಜನರನ್ನು ಕೊಡಗು ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸಾಂಸ್ಥಿಕ ಮತ್ತು ಗೃಹ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ.
ಆದರೆ ಗೃಹ ಸಂಪರ್ಕ ತಡೆಯಲ್ಲಿರುವ ಕೆಲವರು ಗೃಹ ಸಂಪರ್ಕ ತಡೆಯ ನಿಯಮವನ್ನು ಮೀರಿ ಹೊರಗೆ ಓಡಾಡುತ್ತಿರುವುದು ಕಂಡು ಬಂದಿದ್ದು, ಜಿಲ್ಲಾಡಳಿತವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಗೃಹ ಸಂಪರ್ಕ ತಡೆಯನ್ನು ಉಲ್ಲಂಘಿಸಿದವರನ್ನು ಮುಂಜಾಗ್ರತಾ ಕ್ರಮವಾಗಿ ಗೃಹ ಸಂಪರ್ಕ ತಡೆಯಿಂದ ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

error: Content is protected !!