ರುಚಿಯಾದ ಮೀನಿನ ಸಾರು ಮಾಡುವ ವಿಧಾನ

24/06/2020

ಹಲವಾರು ಬಗೆಯ ಮೀನುಗಳನ್ನು ತಿನ್ನುತ್ತೇವೆ. ಪ್ರತಿಯೊಂದು ತನ್ನದೇ ಆದ ವಿಶಿಷ್ಟ ರುಚಿಯನ್ನು ಹೊಂದಿರುತ್ತದೆ. ಯಾವ ಮೀನಿಗೆ ಯಾವ ರೀತಿಯಲ್ಲಿ ಅಡುಗೆ ಮಾಡಿದರೆ ಹೆಚ್ಚು ರುಚಿಕರವಾಗಿರುತ್ತದೆ ಎಂಬ ಐಡಿಯಾ ಮೀನು ಪ್ರಿಯರಿಗೆ ಇದ್ದೇ ಇರುತ್ತದೆ.

ಬೇಕಾಗುವ ಪದಾರ್ಥಗಳು : ಮೀನು ಅರ್ಧ ಕೆಜಿ, ದೊಡ್ಡ ನಿಂಬೆ ಹಣ್ಣು ಗಾತ್ರದಷ್ಟು ಹುಣಸೆಹಣ್ಣು, ಈರುಳ್ಳಿ2, ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ, ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ, ಟೊಮೆಟೊ 2, ತೆಂಗಿನ ತುರಿ 1 ತೆಂಗಿನ ತುರಿ 1 ಕಪ್, ಹಸಿ ಮೆಣಸಿನಕಾಯಿ 2, ಖಾರದ ಪುಡಿ (ಖಾರಕ್ಕೆ ತಕ್ಕಷ್ಟು), ಸ್ವಲ್ಪ ಕರಿಬೇವಿನ ಎಲೆ, ನೀರು 1 ಕಪ್ರು, ಚಿಗ ತಕ್ಕ ಉಪ್ಪು ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ: ಮೀನನ್ನು ಶುದ್ಧ ಮಾಡಿ, ಅದಕ್ಕೆ ಹುಣಸೆ ಹಣ್ಣಿನ ರಸ ಮತ್ತು ಉಪ್ಪು ಹಾಕಿ ಅರ್ಧ ಗಂಟೆ ಇಡಿ. ತೆಂಗಿನ ತುರಿಯನ್ನು ಪೇಸ್ಟ್ ಮಾಡಿ ಇಡಿ. ನಂತರ ಮಣ್ಣಿನ ಮಡಕೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಕರಿಬೇವಿನ ಎಲೆ ಮತ್ತು ಚಿಕ್ಕದಾಗಿ ಕತ್ತರಿಸಿದ ಶುಂಠಿ ಹಾಕಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2-3 ನಿಮಿಷ ಫ್ರೈ ಮಾಡಿ. ನಂತರ ಟೊಮೆಟೊ ಹಾಕಿ, ಮೆತ್ತಗಾಗುವವರೆಗೆ ಫ್ರೈ ಮಾಡಬೇಕು. ನಂತರ ರುಬ್ಬಿದ ಪೇಸ್ಟ್ ಹಾಕಿ, ಖಾರದ ಪುಡಿ, ಅರಿಶಿಣ ಪುಡಿ ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿ, ಮಿಶ್ರಣ ಕುದಿ ಬರುವಾಗ ಮೀನನ್ನು ಹಾಕಿ ಬೇಯಿಸಿ, ಉರಿಯಿಂದ ಇಳಿಸುವಾಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮೀನಿನ ಸಾರು ರೆಡಿ.