ಸೋಮವಾರಪೇಟೆಯಲ್ಲಿ 10 ದಿನ ಕ್ಷೌರದ ಅಂಗಡಿಗಳು ಬಂದ್

24/06/2020

ಮಡಿಕೇರಿ ಜೂ.24 : ಸೋಮವಾರಪೇಟೆ ತಾಲ್ಲೂಕಿನ ಶಿರಂಗಾಲ‌ ಗ್ರಾಮದ ಹಣ್ಣಿನ‌ ವ್ಯಾಪಾರಿ‌ ಸೇರಿದಂತೆ ಇಬ್ಬರು ಮಕ್ಕಳಿಗೆ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆ ಮುಂದಿನ ಹತ್ತು ದಿನಗಳ ಕಾಲ ಸೋಮವಾರಪೇಟೆಯಲ್ಲಿ ಕ್ಷೌರದ ಅಂಗಡಿಗಳನ್ನು ತೆರೆಯದೆ ಇರಲು ಸವಿತಾ ಸಮಾಜ ನಿರ್ಧರಿಸಿದೆ.
ಜನರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸೋಂಕು ವ್ಯಾಪಿಸದಂತೆ ತಡೆಯಲು ಸೆಲೂನ್ ಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ಪ್ರಮುಖರು ಸ್ಪಷ್ಟಪಡಿಸಿದ್ದಾರೆ.