ನೋಣಿ ಹಣ್ಣಿನ ಔಷಧೀಯ ಗುಣಗಳು

24/06/2020

ನೋಣಿ ಹಣ್ಣು ಮೊರಿಂಡಾ ಸಿಟ್ರಿ ಫೋಲಿಯಾ ಜಾತಿಗೆ ಸೇರಿದೆ. ಪೆಸೆಫಿಕ್ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುವ ಈ ಸಸ್ಯವು ನಿತ್ಯ ಹಸುರಾಗಿರುತ್ತದೆ. ಈ ಹಿ೦ದೆ ಇ೦ಡೋನೇಶಿಯಾ ದಿ೦ದ ಆಸ್ಟ್ರೇಲಿಯಾದವರೆಗೆ ಇದನ್ನು ಬೆಳೆಯುತ್ತಿದ್ದು ಈಗ ವಿಸ್ತಾರವಾದ ಭೂ ಪ್ರದೇಶದಲ್ಲಿ ಬೆಳೆಯುತ್ತದೆ. ಇದಕ್ಕೆ ಕಾರಣವೆ೦ದರೆ ಎಲ್ಲ ತರಹದ ಭೌಗೋಳಿಕ ವೈವಿಧ್ಯತೆಗೆ ಈ ಸಸ್ಯ ಒಗ್ಗಿಕೊ೦ಡಿರುವುದು. ಬ೦ಜರು ಭೂಮಿಯಲ್ಲಿ, ಆಮ್ಲೀಯ ಮಣ್ಣಿನಲ್ಲಿ, ಕ್ಷಾರೀಯ ಮಣ್ಣಿನಲ್ಲಿ ಇದು ಬೆಳೆಯುತ್ತದೆ.

ಔಷಧೀಯ ಗುಣಗಳು :

ನೋಣಿ ರಸವನ್ನು ಗಂಟು ನೋವು, ಕೈ ಮಡಚುವ ತೊಂದರೆ, ಕಾಲು ನೋವು ಮತ್ತು ಮಂಡಿ ನೋವಿಗೆ ಪರಿಹಾರವಾಗಿ ಉಪಯೋಗಿಸುತ್ತಿದ್ದಾರೆ. ಉಸಿರಾಟದ ಸಮಸ್ಯೆ ನಿವಾರಣೆಗೂ ಇದು ಉಪಯುಕ್ತ. ಮುರಿದ ಎಲುಬುಗಳನ್ನು ಮರುಜೋಡಿಸಲು ಹಾಗೂ ಡಯಾಬಿಟಿಸ್, ಏರು ರಕ್ತದೊತ್ತಡ ನಿಯಂತ್ರಣಕ್ಕೂ ಬಳಕೆಯಾಗುತ್ತಿದೆ. ಮಲಬದ್ಧತೆಯ ಸಮಸ್ಯೆ ಇರುವವರೂ ನೋಣಿ ರಸ ಸೇವಿಸಬಹುದು.ಅನೇಕ ವಿಶ್ವವಿದ್ಯಾನಿಲಯಗಳು ಸಂಶೋಧನೆ ಸಮೀಕ್ಷೆಗಳ ಪ್ರಕಾರ, ನೋಣಿಯ ರಸ ಆರೋಗ್ಯವರ್ಧಕ ಎಂಬುದು ದೃಢಪಟ್ಟಿದೆ. ಕೀಲು ನೋವು, ಹ್ರದಯ ಸಂಬಂಧ ಕಾಯಿಲೆ, ಖಿನ್ನತೆ ಹಾಗೂ ನಿದ್ರಾಹೀನತೆಯಿಂದ ತೊಂದರೆ ಅನುಭವಿಸುತ್ತಿರುವವರು ಇದರ ಮೊರೆ ಹೋಗಬಹುದು.

ಆಹಾರದಲ್ಲಿ ಬಳಕೆ :

ಅಮೆರಿಕದಲ್ಲಿ ನೋಣಿ ಪಾನೀಯವನ್ನು ಆಹಾರ ಸೇವನೆಯ ನಂತರ ಆರೋಗ್ಯಕರ ಪೇಯವಾಗಿ ಉಪಯೋಗಿಸಿಲಾಗುತ್ತದೆ. ಡಾ.ನೈಲ್ ಸೋಲೊಮನ್ ಎಂಬಾತ ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಇದರಲ್ಲಿ ಔಷಧೀಯ ಗುಣ, ಪೌಷ್ಟಿಕಾಂಶ ಮತ್ತು ರೋಗನಿರೋಧಕ ಶಕ್ತಿ ಇರುವುದನ್ನು ಪತ್ತೆ ಹಚ್ಚಿದ ಬಗ್ಗೆ ದಾಖಲೆಗಳಿವೆ. ನೋಣಿಯನ್ನು “ಭಾರತದ ಮಲ್ಬರಿ” ಎಂದು ಕರೆಯುತ್ತಾರೆ.ಪೊದೆಯ ರೂಪದ ಈ ಗಿಡ, ಸಾಮಾನ್ಯವಾಗಿ ಹತ್ತು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಬಿಳಿ ಹೂ ಬಿಟ್ಟ ನಂತರ ಕಾಯಿಯಾಗುತ್ತದೆ. ನೋನಿ ಹಣ್ಣು ಮೂರರಿಂದ ನಾಲ್ಕು ಡಯಾಮೀಟರಿನಷ್ಟು ದೊಡ್ದದಾಗಿರುತ್ತದೆ. ಬಹು ಉಪಯೋಗಿ ಹಾಗೂ ನೋವು ನಿವಾರಕ ನೋಣಿ ಹಣ್ಣುಗಳನ್ನೇ ಪ್ರಧಾನ ಕ್ರಷಿ ಕಸುಬಾಗಿ ಸ್ವೀಕರಿಸಿ ಯಶಸ್ವಿಯಾಗಿರುವ ರೈತ ಕುಟುಂಬವೊಂದು ಶಿವಮೊಗ್ಗದ ರಾಮೀನಕೊಪ್ಪದಲ್ಲಿದೆ. ಶ್ರೀನಿವಾಸಮೂರ್ತಿ ದಂಪತಿಯ ನೋಣಿ ಬೆಳೆಯುವ ಈ ಸಾಧನೆ ಹಲವು ರೈತರಿಗೆ ಸ್ಫೂರ್ತಿಯಾಗಿದೆ.