ಅಂಗಡಿಗಳಿಗೆ ಹಿರಿಯ ನಾಗರಿಕರು ಬಾರದಂತೆ ಎಚ್ಚರ ವಹಿಸಲು ಚೇಂಬರ್ ಆಫ್ ಕಾಮರ್ಸ್ ಮನವಿ

25/06/2020

ಮಡಿಕೇರಿ ಜೂ. 25 : ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಅಂಗಡಿಗಳಿಗೆ ಹಿರಿಯ ನಾಗರಿಕರು ಬಾರದಂತೆ ಎಚ್ಚರ ವಹಿಸಲು ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಮನವಿ ಮಾಡಿದೆ.

ಕೊಡಗು ಕೊರೋನಾ ಮುಕ್ತವಾಗಿಸುವ ನಿಟ್ಟಿನಲ್ಲಿ ಚೇಂಬರ್ ಆಫ್ ಕಾಮರ್ಸ್ ಸಾಮಾಜಿಕ ಕಳಕಳಿಯನ್ನು ಹೊಂದುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಅಂಗಡಿಗಳಲ್ಲಿ ಹಿರಿಯ ನಾಗರಿಕರು ಕೆಲಸಕ್ಕಿದ್ದರೆ ಕಡ್ಡಾಯವಾಗಿ ರಜೆ ನೀಡಿ ಮನೆಗೆ ಕಳುಹಿಸಿ, ಸಾಧ್ಯವಾದಷ್ಟು ಹಿರಿಯ ನಾಗರಿಕರಿದ್ದಲ್ಲಿಗೆ ಅವರಿಗೆ ಅಗತ್ಯವಾದ ವಸ್ತು, ದಿನಸಿ, ತರಕಾರಿ ವಿತರಿಸಿ. ಆಗಿಂದಾಗ್ಗೆ ಅಂಗಡಿಗಳಿಗೆ ಸ್ಯಾನಿಟೈಸರ್ ಬಳಸುವ ಮೂಲಕ ಸ್ವಚ್ಚತೆ ಕಾಪಾಡಿ ಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು.

ಮಾಸ್ಕ್ ಹಾಕದೇ ಅಂಗಡಿಗಳಿಗೆ ಬಂದವರೊಂದಿಗೆ ವ್ಯವಹರಿಸಬೇಡಿ. ಸರ್ಕಾರದ ಆದೇಶಗಳನ್ನು ಪಾಲಿಸುವ ಮೂಲಕ ಆರೋಗ್ಯದ ರಕ್ಷಣೆಗೆ ಗಮನ ಹರಿಸುವಂತೆ ಮನವಿ ಮಾಡಿದರು.