ನಿವೃತ್ತ ಸೈನಿಕನನ್ನು ಕಾಡಿದ ಕೊರೋನಾ ಸೋಂಕು

25/06/2020

ಮಡಿಕೇರಿ ಜೂ.25 : ಅಸ್ಸಾಂ ನಿಂದ ಬಂದ ನಿವೃತ್ತ ಸೈನಿಕರೋರ್ವರು ಮುಳ್ಳೂರು ಗ್ರಾಮಕ್ಕೆ ಬಂದಿದ್ದು, ಇವರಲ್ಲಿಯೂ ಸೋಂಕು ಪತ್ತೆಯಾಗಿದೆ. ಅಂತೆಯೇ ಶಿರಂಗಾಲದ ಹಣ್ಣಿನ ವ್ಯಾಪಾರಿಯ ಸಂಪರ್ಕದಲ್ಲಿದ್ದ ಕಾರ್ ಮೆಕ್ಯಾನಿಕ್ ಸೇರಿದಂತೆ ಇಬ್ಬರಿಗೆ ಸೋಂಕು ಬಂದಿದೆ. ದೊಡ್ಡಳ್ಳಿ ಗ್ರಾಮದ ಮಹಿಳೆಯ ಪತಿ, ಪತಿಯ ಸಹೋದರನಿಗೂ ಸೋಂಕು ತಗುಲಿದೆ. ಬಿಟ್ಟಂಗಾಲದಲ್ಲಿ ಹೋಂಸ್ಟೇ ನಡೆಸುತ್ತಿದ್ದ 70 ವರ್ಷದ ಮಹಿಳೆಗೂ ಸೋಂಕು ತಗುಲಿದ್ದು, ಹೋಂಸ್ಟೇಗೆ ಬಂದ ಪವಾಸಿಗರಿಂದಲೂ ಸೋಂಕು ತಗುಲಿರುವ ಸಾಧ್ಯತೆಯಿದೆ.