12 ಪ್ರದೇಶಗಳಲ್ಲಿ 28 ದಿನಗಳ ಕಾಲ ನಿರ್ಬಂಧ

25/06/2020

ಮಡಿಕೇರಿ ಜೂ.25 : ಕೋರೋನಾ ಸೋಂಕು ಪೀಡಿತರು ಇದ್ದ ಮಡಿಕೇರಿಯ ಪುಟಾಣಿ ನಗರ, ಡೈರಿ ಫಾರಂ, ಮಂಗೇರಿರ ಮುತ್ತಣ್ಣ ಸರ್ಕಲ್, ಶ್ರೀಓಂಕಾರೇಶ್ವರ ದೇವಾಲಯ ರಸ್ತೆ, ಕೋಟೆ ಮಾರಿಯಮ್ಮ ದೇವಾಲಯ ರಸ್ತೆ, ಮಡಿಕೇರಿ ಬಳಿಯ ಕಗ್ಗೋಡ್ಲು, ತಾಳತ್ತಮನೆ, ಕುಶಾಲನಗರದ ರಥಬೀದಿ, ವಿರಾಜಪೇಟೆ ಬಳಿಯ ಬಿಟ್ಟಂಗಾಲ, ಶಿರಾಗಂಲ, ದೊಡ್ಡಳ್ಳಿ, ಮುಳ್ಳೂರು, ಬಳಗುಂದ ಸೇರಿದಂತೆ 12 ಪ್ರದೇಶಗಳಲ್ಲಿ ಸಂಪೂರ್ಣವಾಗಿ 28 ದಿನಗಳ ಕಾಲ ನಿರ್ಬಂಧ ಹೇರಲಾಗಿದೆ.