ಬಾಡಗರಕೇರಿ ಶ್ರೀಮೃತ್ಯುಂಜಯ ದೇವಸ್ಥಾನದಲ್ಲಿ ಭಕ್ತರಿಗೆ ನಿರ್ಬಂಧ

25/06/2020

ಮಡಿಕೇರಿ ಜೂ.25 : ಕೊರೊನಾ ಆತಂಕಕಾರಿ ಸನ್ನಿವೇಶದ ಹಿನ್ನೆಲೆ ದಕ್ಷಿಣ ಕೊಡಗಿನ ಬಾಡಗರಕೇರಿಯಲ್ಲಿರುವ ಶ್ರೀಮೃತ್ಯುಂಜಯ ದೇವಸ್ಥಾನಕ್ಕೆ ಭಕ್ತಾದಿಗಳ ಆಗಮನವನ್ನು ನಿರ್ಬಂಧಿಸಲು ಅಲ್ಲಿನ ಗ್ರಾಮಸ್ಥರು ಹಾಗೂ ಸಮಿತಿಯವರು ತೀರ್ಮಾನಿಸಿದ್ದಾರೆ.
ದೇವಾಲಯಕ್ಕೆ ಹೊರ ಭಾಗದಿಂದ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗುತಿದ್ದು, ಇದೀಗ ಕೊಡಗಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತಿರುವುದರಿಂದ ಸ್ಥಳೀಯರ ಒತ್ತಾಯದಂತೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಕೆಲವು ದಿನಗಳ ಮಟ್ಟಿಗೆ ಈ ನಿರ್ಬಂಧ ಮುಂದುವರಿಯಲಿದೆ. ಪರಿಸ್ಥಿತಿ ಹತೋಟಿಗೆ ಬಂದ ನಂತರ ಮುಂದಿನ ನಿರ್ಧಾರದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ದೇವಾಲಯ ಸಮಿತಿ ತಿಳಿಸಿದೆ.