ಕರ್ಕಳ್ಳಿ ಬಾಣೆಯ 14 ವರ್ಷದ ಬಾಲಕಿಯಲ್ಲಿ ಸೋಂಕು ದೃಢ

25/06/2020

ಮಡಿಕೇರಿ ಜೂ.25 : ಸೋಮವಾರಪೇಟೆ ಸಮೀಪದ ಕರ್ಕಳ್ಳಿ ಬಾಣೆಯಲ್ಲಿ 14 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದ್ದು, ಈಕೆ ಶಿರಂಗಾಲದ ಹಣ್ಣಿನ ವ್ಯಾಪಾರಿಯ ಪ್ರಾಥಮಿಕ ಸಂಪರ್ಕ ಹೊಂದಿರುವುದು ಕಂಡು ಬಂದಿದೆ.
ಮಡಿಕೇರಿ ತಾಲೂಕಿನ ಕೊಳಗದಾಳು ಗ್ರಾಮದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು, 26 ವರ್ಷದ ಈತ ಕತಾರ್‍ನಿಂದ ಮರಳಿರುವುದಾಗಿ ಹೇಳಲಾಗಿದೆ. ಈ ಎಲ್ಲರನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.