ಕೊಡಗಿನಲ್ಲಿ ಒಟ್ಟು 15 ನಿಯಂತ್ರಿತ ವಲಯ ಗುರುತು

25/06/2020

ಮಡಿಕೇರಿ ಜೂ.25 : ಕೋವಿಡ್-19ರ ಸಂಬಂಧ ಜಿಲ್ಲೆಯಲ್ಲಿ ಒಟ್ಟು 15 ನಿಯಂತ್ರಿತ ವಲಯಗಳನ್ನು ಮಾಡಲಾಗಿದೆ. ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನ ರಸ್ತೆ, ಡೈರಿ ಫಾರಂ, ಕೋಟೆ ಮಾರಿಯಮ್ಮ ದೇವಸ್ಥಾನ ರಸ್ತೆ, ಪುಟಾಣಿ ನಗರ, ತಾಳತ್ ಮನೆ ಹತ್ತಿರ, ಕಗ್ಗೋಡ್ಲು ಹಾಗೂ ಕೊಳಗದಾಳು ಸೇರಿದಂತೆ 7 ಪ್ರದೇಶಗಳು, ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಬಳಿಯ ಶಿರಂಗಾಲ, ದೊಡ್ಡಳ್ಳಿ, ಮುಳ್ಳೂರು, ಬಳಗುಂದ, ಕರ್ಕಳ್ಳಿ ಬಾಣೆ ಮತ್ತು ಕುಶಾಲನಗರ ಪೇಟೆಯ ರಥಬೀದಿ ಸೇರಿದಂತೆ 6, ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಮತ್ತು ಪಾಲಿಬೆಟ್ಟವನ್ನು ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.