ಚೆಟ್ಟಳ್ಳಿಯಲ್ಲಿ ಅರ್ಧ ದಿನ ಮಾತ್ರ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ

26/06/2020

ಮಡಿಕೇರಿ ಜೂ.26 : ಕೊಡಗಿನಲ್ಲಿ ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಚೆಟ್ಟಳ್ಳಿ ಗ್ರಾಮದಲ್ಲಿ ಅರ್ಧ ದಿನ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಸ್ಥಳೀಯ ವರ್ತಕರು ನಿರ್ಧರಿಸಿದ್ದಾರೆ.
ವಿವಿಧ ಅಂಗಡಿ, ಮಳಿಗೆಗಳ‌ ಮಾಲೀಕರು ಸಭೆ ನಡೆಸಿ ಮುಂಜಾಗ್ರತಾ ಕ್ರಮವಾಗಿ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ವ್ಯವಹಾರ ನಡೆಸಲು ನಿರ್ಧರಿಸಿದರು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂಗಡಿಗಳಿಗೆ ಬರುವಂತೆ ಮನವಿ ಮಾಡಿದರು.